ಚೆನ್ನೈ,ತಮಿಳುನಾಡು: ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರ ಸಬಲೀಕರಣದ ಬಗ್ಗೆ ಚರ್ಚೆಯಾಗುತ್ತಿದೆ. ರಾಜಕೀಯ ಪ್ರಾತಿನಿಧ್ಯ ವಿಚಾರದಲ್ಲೂ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ವಾಸ್ತವವಾಗಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆಯಿದೆ.
ತಮಿಳುನಾಡು ಮಟ್ಟಿಗೆ ಹೇಳುವುದಾದರೆ ಮಹಿಳೆಯರು ಶಿಕ್ಷಣ, ಉದ್ಯೋಗ, ಆಸ್ತಿ ಹಕ್ಕುಗಳು ಮತ್ತು ಮೀಸಲಾತಿಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. ಆದರೆ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಅವರ ಪ್ರಾತಿನಿಧ್ಯದ ವಿಷಯ ಬಂದಾಗ, ತುಂಬಾ ಕಡಿಮೆ ಎಂದು ಹೇಳಲಾಗುತ್ತಿದೆ.
ಡಿಎಂಕೆ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ಸಿ.ಎನ್. ಅಣ್ಣಾದುರೈ ಅವರ ನೇತೃತ್ವದ ಸರ್ಕಾರ 1967ರಲ್ಲಿ ಜಾರಿಯಾದಾಗ ಅಲ್ಲಿನ ವಿಧಾನಸಭೆಯಲ್ಲಿ ಕೇವಲ ಮೂವರು ಮಹಿಳಾ ಶಾಸಕರಿದ್ದರು. 1991ರಲ್ಲಿ ಜೆ. ಜಯಲಲಿತಾ ಆಡಳಿತದಲ್ಲಿ ವ್ಯವಹಾರಗಳ ಚುಕ್ಕಾಣಿ ಹಿಡಿದಿದ್ದಾಗ ಈ ಸಂಖ್ಯೆ 32ಕ್ಕೆ ತಲುಪಿತು. 2016ರಲ್ಲಿ 21 ಮಹಿಳೆಯರು ಶಾಸಕಿಯರಿದ್ದರು.
ಇದನ್ನೂ ಓದಿ:ಬಿಜೆಪಿ ಬೆಂಬಲಿಗರಿಂದ ಹಲ್ಲೆ ಆರೋಪ: ಗಾಯಗೊಂಡ ಟಿಎಂಸಿ ನಾಯಕ ಉದಯನ್ ಗುಹಾ
ಈಗ ಸದ್ಯಕ್ಕೆ 2021ರ ವಿಧಾನಸಭಾ ಚುನಾವಣಾ ಫಲಿತಾಂಶಗಳು ಹೊರಬಿದ್ದಾಗ ಕೇವಲ 12 ಮಹಿಳೆಯರು ಶಾಸಕಿಯರಾಗಿದ್ದಾರೆ. ಅಂದರೆ ಕೇವಲ 5ರಷ್ಟು ಮಹಿಳೆಯರು ತಮಿಳುನಾಡು ವಿಧಾನಸಭೆಗೆ ಕಾಲಿರಿಸಿದ್ದಾರೆ. ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಇಲ್ಲದ ಕಾರಣದಿಂದ ಅಲ್ಲಿ ಮಹಿಳೆಯರಿಗೆ ರಾಜಕೀಯ ಪಾಲ್ಗೊಳ್ಳುವಿಕೆ ಕಡಿಮೆಯಾಗಿದೆ.
ರಾಜಕೀಯದಲ್ಲಿ ಮಹಿಳೆಯರ ಕಡಿಮೆ ಪ್ರಾತಿನಿಧ್ಯದ ಕುರಿತು ನಿವೃತ್ತ ಐಎಎಸ್ ಅಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತೆ ಶಿವಗಾಮಿ ಪ್ರತಿಕ್ರಿಯೆ ನೀಡಿದ್ದು, ಹೆಚ್ಚಿನ ರಾಜಕೀಯ ಪಕ್ಷಗಳು ಪ್ರಬಲ ಆರ್ಥಿಕ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿವೆ. ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕಿದೆ ಎಂದು ಒತ್ತಾಯಿಸಿದ್ದಾರೆ.
ವಿವಿಧ ವರ್ಷಗಳಲ್ಲಿ ಮಹಿಳಾ ಶಾಸಕಿಯರ ಬಲಾಬಲ
- 1967 - 3
- 1971 - 0
- 1977 - 2
- 1980 - 5
- 1984 - 8
- 1989 - 9
- 1991 - 32
- 1996 - 11
- 2001 - 24
- 2006 - 22
- 2011 - 17
- 2016 - 21
- 2021 - 12