ಕರ್ನಾಟಕ

karnataka

ETV Bharat / bharat

ಗಂಡು ಮಗುವಿಗೆ ಜನ್ಮ ನೀಡಿದ ಟಿಎಂಸಿ ಸಂಸದೆ ನುಸ್ರತ್​ ಜಹಾನ್​! - ನುಸ್ರತ್​ ಜಹಾನ್,

ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್​ ಸಂಸದೆ ನುಸ್ರತ್​ ಜಹಾನ್​ ಗಂಡು ಮಗುವಿನ ತಾಯಿಯಾಗಿದ್ದು, ಅನೇಕರು ಟ್ವಿಟ್ ಮಾಡಿ ವಿಶ್ ಮಾಡಿದ್ದಾರೆ.

TMC MP Nusrat Jahan
TMC MP Nusrat Jahan

By

Published : Aug 26, 2021, 3:09 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ):ತೃಣಮೂಲ ಕಾಂಗ್ರೆಸ್​ ಸಂಸದೆ ನುಸ್ರತ್ ಜಹಾನ್​​ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು, ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೋಲ್ಕತ್ತಾ ಆಸ್ಪತ್ರೆಯಲ್ಲಿ ಮಗುವಿನ ಜನನವಾಗಿದೆ. ಮಗು ಹಾಗೂ ತಾಯಿ ಆರೋಗ್ಯವಾಗಿದ್ದಾರೆಂದು ವೈದ್ಯಕೀಯ ಮೂಲಗಳು ಮಾಹಿತಿ ನೀಡಿವೆ.

ಟಿಎಂಸಿ ಸಂಸದೆ ನುಸ್ರತ್ ಜಹಾನ್​

31 ವರ್ಷದ ಟಿಎಂಸಿ ಸಂಸದೆ ಆಗಸ್ಟ್​​ 25ರ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದು, ಇದರ ಬೆನ್ನಲ್ಲೇ ಇಂದು ಮಧ್ಯಾಹ್ನ ಮಗುವಿಗೆ ಜನ್ಮ ನೀಡಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ಪತಿ ನಿಖಿಲ್ ಜೈನ್​​ನಿಂದ ವಿಚ್ಛೇಧನ ಪಡೆದುಕೊಂಡಿದ್ದ ನಟಿ, ನಂತರ ಗೆಳೆಯ, ನಟ ಯಶ್​ದಾಸ್ ಗುಪ್ತಾ ಜೊತೆ ಡೇಟಿಂಗ್​ ನಡೆಸುತ್ತಿದ್ದರು. ಆದರೆ ಇವರು ಮದುವೆ ಮಾಡಿಕೊಂಡಿರಲಿಲ್ಲ.

2019ರಲ್ಲಿ ಉದ್ಯಮಿ ನಿಖಿಲ್​​ ಜೈನ್(ಟರ್ಕಿ)​ ಜೊತೆ ನುಸ್ರತ್ ಜಹಾನ್​ ವಿವಾಹವಾಗಿದ್ದು. ಇದಾದ ಬಳಿಕ ಇಬ್ಬರ ಜೀವನದಲ್ಲಿ ಕೆಲವೊಂದು ಮನಸ್ತಾಪಗಳು ಹುಟ್ಟುಕೊಂಡಿದ್ದ ಕಾರಣ ವಿಚ್ಛೇಧನ ಪಡೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ಇದಾದ ಬಳಿಕ ನಟ ಯಶ್​​​ದಾಸ್ ಜೊತೆ ಡೇಟಿಂಗ್ ನಡೆಸಲು ಶುರು ಮಾಡಿದ್ದರು. ಕಳೆದ ಕೆಲ ದಿನಗಳ ಹಿಂದೆ ಸಂಸದೆಯ ಬೇಬಿ ಬಂಪ್​ ಫೋಟೋಗಳು ವೈರಲ್​ ಆಗಿದ್ದವು. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗೆ ಗುರಿಯಾಗಿದ್ದರು.

ಇದನ್ನೂ ಓದಿರಿ: ಟಿಎಂಸಿ ಸಂಸದೆ ನುಸ್ರತ್​ ಬೇಬಿ ಬಂಪ್​ ಫೋಟೊ ವೈರಲ್​...

ಆಸ್ಪತ್ರೆಯಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿರುವ ನುಸ್ರತ್​ ಜಹಾನ್​ಗೆ ರಾಜಕಾರಣಿ ಮಿಮಿ ಚಕ್ರವರ್ತಿ ಟ್ವೀಟ್​ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ.

ABOUT THE AUTHOR

...view details