ಕರ್ನಾಟಕ

karnataka

ETV Bharat / bharat

ಬಿಹಾರದ ಗಲಭೆಕೋರರ ಗಲ್ಲಿಗೇರಿಸುವ ಶಾ, ಗುಜರಾತ್​ನ ಅತ್ಯಾಚಾರಿಗಳಿಗೆ ಲಡ್ಡು ತಿನ್ನಿಸುತ್ತಿದ್ದಾರೆ: ಸಂಸದೆ ಮಹುವಾ ವಾಗ್ದಾಳಿ - tmc mp mahua moitra slams against amit shah

ಶನಿವಾರ ಬಿಹಾರದಲ್ಲಿ ರ‍್ಯಾಲಿ ಮಾಡಿದ್ದ ಗೃಹ ಸಚಿವ ಅಮಿತ್​ ಶಾ ರಾಮನವಮಿ ದಿನ ಗಲಭೆಗೆ ಕಾರಣರಾಗಿದ್ದವರನ್ನು ತಲೆಕೆಳಗಾಗಿ ಗಲ್ಲಿಗೇರಿಸಬೇಕು ಎಂದು ಹೇಳಿಕೆ ನೀಡಿದ್ದರು.

Home minister Amith Shah and MP Muhua Moitra
ಗೃಹ ಸಚಿವ ಅಮಿತ್​ ಶಾ ಹಾಗೂ ಸಂಸದೆ ಮಹುವಾ ಮೊಯಿತ್ರಾ

By

Published : Apr 3, 2023, 8:46 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ):ಬಿಹಾರದಲ್ಲಿ ರಾಮನವಮಿ ಆಚರಣೆ ವೇಳೆ ಗಲಾಟೆ ಸೃಷ್ಟಿಸಿದ್ದ ಗಲಭೆಕೋರರನ್ನು ತಲೆಕೆಳಗಾಗಿ ಗಲ್ಲಿಗೇರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ನೀಡಿದ್ದ ಹೇಳಿಕೆಗೆ, ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಾಗ್ದಾಳಿ ನಡೆಸಿದ್ದಾರೆ. ಟ್ವೀಟ್​ ಮಾಡಿರುವ ಸಂಸದೆ ಮಹುವಾ ಮೊಯಿತ್ರಾ, ಕೇಂದ್ರ ಗೃಹ ಸಚಿವ ಅಮಿತಾ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಅಮಿತ್​ ಶಾ ಗುಜರಾತ್​ನಲ್ಲಿ ಮಾತ್ರ ಕೊಲೆಗಾರರು ಹಾಗೂ ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆ ಮಾಡುತ್ತಾರೆ ಎಂದು ಟಾಂಗ್​ ಕೊಟ್ಟಿದ್ದಾರೆ.

ತೃಣಮೂಲ ಕಾಂಗ್ರೆಸ್​ ಸಂಸದೆ, "ಬಿಹಾರದಲ್ಲಿ ಗಲಭೆಕೋರರನ್ನು ತಲೆಕೆಳಗಾಗಿ ಗಲ್ಲಿಗೇರಿಸುವುದಾಗಿ ಗೃಹ ಸಚಿವರು ಬೆದರಿಕೆ ಹಾಕಿದ್ದಾರೆ. ಬಿಹಾರದಲ್ಲಿ ಗಲಭೆಕೋರರನ್ನು ಗಲ್ಲಿಗೇರಿಸುತ್ತೇನೆ ಎಂದು ಹೇಳುವ ಗೃಹ ಸಚಿವ ಅಮಿತ್​ ಶಾ ಅವರು ಗುಜರಾತ್‌ನಲ್ಲಿ ಮಾತ್ರ ಕೊಲೆಗಾರರು ಮತ್ತು ಅತ್ಯಾಚಾರಿಗಳನ್ನು ಜೈಲಿನಿಂದ ಬಿಡುಗಡೆ ಮಾಡುತ್ತಾರೆ. ಅವರಿಗೆ ಲಡ್ಡು ಸಿಹಿಯನ್ನೂ ತಿನ್ನಿಸುತ್ತಾರೆ" ಎಂದು ಟ್ವೀಟ್​ ಪ್ರಹಾರ ನಡೆಸಿದ್ದಾರೆ.

ಗುಜರಾತ್‌ನಲ್ಲಿ ನಡೆದ ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳ ಬಿಡುಗಡೆ ಕುರಿತು ಬಿಜೆಪಿ ಹಾಗೂ ಗೃಹ ಸಿಚವ ಅಮಿತ್​ ಶಾ ಅವರನ್ನು ಗುರಿಯಾಗಿಸಿ ಮಹುವಾ ಮೊಯಿತ್ರಾ ಕಿಡಿ ಕಾರಿದ್ದಾರೆ. "ಕಳೆದ ವರ್ಷ ಗುಜರಾತ್ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ರಾಜ್ಯ ಸರ್ಕಾರ ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿದೆ" ಎಂದು ಹೇಳಿದರು.

ತೃಣಮೂಲ ಕಾಂಗ್ರೆಸ್​ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಹೌರಾದಲ್ಲಿ ನಡೆದ ಶಿವಪುರ ಭಯೋತ್ಪಾದಕ ಘಟನೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದು, ಹೌರಾದಲ್ಲಿ ನಡೆದ ಹಿಂಸಾಚಾರದ ಹಿಂದೆ ಅಮಿತ್​ ಶಾ ಇದ್ದಾರೆ ಎಂದು ನಾನು ನಂಬುತ್ತೇನೆ ಎಂದು ಅವರು ಆರೋಪಿಸಿದ್ದಾರೆ. ಶನಿವಾರ ಕೇಂದ್ರ ಗೃಹ ಸಚಿವ ಅಮಿತ್​ ಶಾ ಬಿಹಾರದಲ ನೌಡಾದಲ್ಲಿ ನಡೆದ ರ‍್ಯಾಲಿಯಲ್ಲಿ ಭಾಗವಹಿಸಿದ್ದು, ಈ ವೇಳೆ, ರಾಮನವಮಿ ಆಚರಣೆಯ ಸಂದರ್ಭದಲ್ಲಿ ಬಿಹಾರ ರಾಜ್ಯದ ಹಲವಾರು ಪ್ರದೇಶಗಳಲ್ಲಿ ಭುಗಿಲೆದ್ದ ಹಿಂಸಾಚಾರವನ್ನು ನಿಯಂತ್ರಿವಲ್ಲಿ ನಿತೀಶ್​ ಕುಮಾರ್​ ಸರ್ಕಾರ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಶಾ ವಾಗ್ದಾಳಿ ನಡೆಸಿದ್ದರು. ಇದೇ ವೇಳೆ, 2025ರಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂಸಾಚಾರ ನಡೆಸುತ್ತಿರುವ ಗಲಭೆಕೋರರನ್ನು ತಲೆಕೆಳಗಾಗಿ ಗಲ್ಲಿಗೇರಿಸಲಾಗುವುದು ಎಂದು ಹೇಳಿಕೆ ನೀಡಿದ್ದರು.

ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಗೃಹ ಸಚಿವ ಅಮಿತ್​ ಶಾ, ತಾವು ಬಿಹಾರದ ಸಾಸ್ರಾಮ್​ ನಗರಕ್ಕೆ ಹೋಗಬೇಕಿತ್ತು. ಆದರೆ ರಾಮನವಮಿ ಆಚರಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರದಿಂದಾಗಿ ತಮ್ಮ ಭೇಟಿಯನ್ನು ರದ್ದುಗೊಳಿಸಬೇಕಾಯಿತು ಎಂದು ಹೇಳಿದ್ದರು. ನಿತೀಶ್​ ಕುಮಾರ್​ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಶಾ, ರಾಜ್ಯದಲ್ಲಿ ಭಯೋತ್ಪಾದನೆ ಹೆಚ್ಚಾಗಿರುವುದಕ್ಕೆ ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಕಾರಣವಾಗಿದೆ. ಲಾಲೂ ಪ್ರಸಾದ್​ ಯಾದವ್​ ಅವರ ಆರ್​ಜೆಡಿ ಎಂದಿಗೂ ಬಿಹಾರದಲ್ಲಿ ಶಾಂತಿಯನ್ನು ತರಲು ಸಾಧ್ಯವಿಲ್ಲ. ಬಿಹಾರದಲ್ಲಿ ಶಾಂತಿಯುತ ರಾಜ್ಯವನ್ನು ಸ್ಥಾಪನೆ ಮಾಡಲು 'ಮಹಾಘಟಬಂಧನ್​' ಅನ್ನು ಕಿತ್ತು ಹಾಕಬೇಕು ಎಂದು ಕರೆ ನೀಡಿದ್ದರು.

ಇದನ್ನೂ ಓದಿ:ಬಿಹಾರ ಪ್ರವಾಸದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ: ನಿಷೇಧಾಜ್ಞೆ ಹಿನ್ನೆಲೆ ಸಸಾರಾಮ್​ ಭೇಟಿ ರದ್ದು

ABOUT THE AUTHOR

...view details