ಕೋಲ್ಕತ್ತಾ(ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ಅಂಕಲ್ ಜಿ ಎಂದು ಸಂಬೋಧಿಸಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಅಂಕಲ್ ಜಿ ಕುಟುಂಬದ ಸದಸ್ಯರು ಹಾಗೂ ಪರಿಚಯಸ್ಥರನ್ನು ರಾಜಭವನದಲ್ಲಿ ವಿಶೇಷ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ಅಬ್ಭುದೋಯ್ ಸಿಂಗ್ ಶೇಖಾವತ - ರಾಜ್ಯಪಾಲರ ವಿಶೇಷ ಅಧಿಕಾರಿ, ಅಖಿಲ್ ಚೌಧರಿ - ರಾಜ್ಯಪಾಲರ ವಿಶೇಷ ಸಂವಹನಾಧಿಕಾರಿ, ಪ್ರಸಾಂತ್ ದೀಕ್ಷಿತ್ - ಶಿಷ್ಟಾಚಾರಗಳ ವಿಶೇಷ ಅಧಿಕಾರಿ, ಕೌಸ್ತವ್ ವಾಲಿಕಾರ - ಐಟಿ ವಿಶೇಷ ಅಧಿಕಾರಿ ಮತ್ತು ಹೊಸದಾಗಿ ನೇಮಿಸಲ್ಪಟ್ಟ ವಿಶೇಷ ಅಧಿಕಾರಿ - ಕಿಶನ್ ಧಂಕರ್" ಇವರೆಲ್ಲರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.