ಕರ್ನಾಟಕ

karnataka

ETV Bharat / bharat

ದೀದಿಗೆ ಮೃತದೇಹಗಳೊಂದಿಗೆ ರಾಜಕೀಯ ಮಾಡುವ ಹಳೆಯ ಅಭ್ಯಾಸವಿದೆ: ಮೋದಿ ಟಾಂಗ್​​​ - ಪಶ್ಚಿಮ ಬಂಗಾಳ ಚುನಾವಣೆ 2021

ಪಶ್ಚಿಮ ಬಂಗಾಳದಲ್ಲಿ ಇಂದು 5ನೇ ಹಂತದ ಚುನಾವಣೆ ನಡೆಯುತ್ತಿದ್ದು, ಈ ನಡುವೆ ಅಸನ್ಸೂಲ್ ಪ್ರದೇಶದಲ್ಲಿ ಪ್ರಧಾನಿ ಮೋದಿ ಪ್ರಚಾರದಲ್ಲಿ ತೊಡಗಿದ್ದಾರೆ. ಅಸನ್ಸೂಲ್ ಪ್ರದೇಶದಲ್ಲಿ ಏಪ್ರಿಲ್​ 27ಕ್ಕೆ 7ನೇ ಹಂತದ ಚುನಾವಣೆ ನಡೆಯಲಿದೆ.

PM Modi
ಪ್ರಧಾನಿ ಮೋದಿ

By

Published : Apr 17, 2021, 3:32 PM IST

ಅಸನ್ಸೂಲ್​ (ಪಶ್ಚಿಮ ಬಂಗಾಳ): ಮಮತಾ ಬ್ಯಾನರ್ಜಿ ಬಿಗಿ ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ದೀದಿ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.

ಅಸನ್ಸೋಲ್ ಕೈಗಾರಿಕಾ ಪ್ರದೇಶದಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಭಾಷಣ ಮಾಡಿದ ಮೋದಿ, ಈಗಾಗಲೇ 4 ಹಂತದ ಚುನಾವಣೆಯಲ್ಲಿ ಟಿಎಂಸಿ ಒಡೆದು ಪುಡಿಯಾಗಿದೆ. ಟಿಎಂಸಿ ಅಧ್ಯಕ್ಷೆಗೆ ಮೃತದೇಹಗಳ ಮೇಲೆ ರಾಜಕೀಯ ಮಾಡುವ ಅಭ್ಯಾಸವಿದೆ. ಸಿಟಲ್​​ಕುಚಿಯಲ್ಲಿ ನಡೆದ ಐವರ ಸಾವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ದುರದೃಷ್ಟಕರ ಸಾವನ್ನು ರಾಜಕೀಯ ಮಾಡುವ ಮೂಲಕ ಮಮತಾ ಅವರು ತಮ್ಮ ಅಸೂಕ್ಷ್ಮತೆಯನ್ನ ಮತ್ತೊಮ್ಮೆ ಸಾಬೀತುಮಾಡಿದ್ದಾರೆ. ಸತ್ಯ ಏನೆಂದರೆ, ಐವರ ಸಾವಿನಿಂದ ದೀದಿ ತನ್ನದೇ ರಾಜಕೀಯ ಲಾಭದ ಬಗ್ಗೆ ಯೋಚಿಸಿದ್ದಾರೆ, ಅವರಿಗೆ ಮೃತ ದೇಹಗಳೊಂದಿಗೆ ರಾಜಕೀಯ ಮಾಡುವ ಹಳೆಯ ಅಭ್ಯಾಸವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಸತತ ಮೂರನೇ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿಯಲು ತಮ್ಮ ಟಿಎಂಸಿ ಪರವಾಗಿ ಮಮತಾ ಬ್ಯಾನರ್ಜಿ ಹಾಗೂ ಅವರ ಅಳಿಯ ಆಭಿಷೇಕ್ ಪ್ರಚಾರದಲ್ಲಿ ತೊಡಗಿದ್ದಾರೆ.

ABOUT THE AUTHOR

...view details