ಕರ್ನಾಟಕ

karnataka

ETV Bharat / bharat

ರಾಜಕೀಯ ದ್ವೇಷಕ್ಕೆ ಟಿಎಂಸಿ ಮುಖಂಡನ ಮನೆ ಉಡೀಸ್​.. ಬಾಂಬ್​ ಸ್ಫೋಟಕ್ಕೆ ಮೂವರು ಬಲಿ - ಟಿಎಂಸಿ ನಾಯಕನ ಮನೆ ಸ್ಫೋಟ

ಬಾಂಬ್​ ಸ್ಫೋಟದಲ್ಲಿ ಪಶ್ಚಿಮಬಂಗಾಳದ ಟಿಎಂಸಿ ಮುಖಂಡನ ಮನೆ ಛಿದ್ರವಾಗಿದೆ. ಘಟನೆಯಲ್ಲಿ ಮೂವರು ಟಿಎಂಸಿ ಕಾರ್ಯಕರ್ತರು ಮೃತಪಟ್ಟ ಬಗ್ಗೆ ತಿಳಿದುಬಂದಿದೆ.

tmc-booth-president-residence-blast-in-west-bengal
ರಾಜಕೀಯ ದ್ವೇಷಕ್ಕೆ ಟಿಎಂಸಿ ಮುಖಂಡನ ಮನೆ ಉಡೀಸ್

By

Published : Dec 3, 2022, 11:00 AM IST

ಕೋಲ್ಕತ್ತಾ(ಪಶ್ಚಿಮಬಂಗಾಳ):ಪಶ್ಚಿಮಬಂಗಾಳದಲ್ಲಿ ರಾಜಕೀಯ ದ್ವೇಷ ಮತ್ತೆ ಹೊಗೆಯಾಡಿದೆ. ಮುಂದೆ ನಡೆಯಲಿರುವ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್​ನ ಬೂತ್​ ಅಧ್ಯಕ್ಷನ ಮನೆಯನ್ನು ಬಾಂಬ್​ ಇಟ್ಟು ಉಡಾಯಿಸಲಾಗಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.

ಪುರ್ಬಾ ಮೇದಿನಿಪುರದ ಅರ್ಜುನ್ ನಗರ ಪ್ರದೇಶದಲ್ಲಿರುವ ಟಿಎಂಸಿಯ ಬೂತ್ ಅಧ್ಯಕ್ಷ ರಾಜ್‌ಕುಮಾರ್ ಮನ್ನಾ ಅವರ ನಿವಾಸವನ್ನು ನಿನ್ನೆ ರಾತ್ರಿ ಸ್ಫೋಟಿಸಲಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಇಂದು ಕೊಂಟೈನಲ್ಲಿ ಸಾರ್ವಜನಿಕ ರ್ಯಾಲಿ ನಡೆಸುವುದಕ್ಕೂ ಮೊದಲು ಈ ದುರಂತ ನಡೆದಿದೆ.

ಬಾಂಬ್ ಸ್ಫೋಟಿಸಿದ ರಭಸಕ್ಕೆ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಶವಗಳ ಗುರುತು ಕಾರ್ಯ ನಡೆದಿಲ್ಲ. ಘಟನೆಯಲ್ಲಿ ಇನ್ನಷ್ಟು ಜನರು ಗಾಯಗೊಂಡಿದ್ದಾರೆ.

ಓದಿ:ದಟ್ಟ ಮಂಜಿನಿಂದ ಅವಾಂತರ.. ಮರಕ್ಕೆ ಕಾರು ಡಿಕ್ಕಿಯಾಗಿ ನಾಲ್ವರು ದುರ್ಮರಣ

ABOUT THE AUTHOR

...view details