ಕರ್ನಾಟಕ

karnataka

ETV Bharat / bharat

ನಾಳೆಯಿಂದ ಆಫ್‌ಲೈನ್‌ನಲ್ಲಿ ತಿರುಮಲ ಸರ್ವ ದರ್ಶನ ಟೋಕನ್‌ಗಳ ವಿತರಣೆ! - ತಿರುಮಲ ಸರ್ವದರ್ಶನ ಟೋಕನ್‌ಗಳ ವಿತರಣೆ

ಕೊರೊನಾ ಸಾಂಕ್ರಾಮಿಕ ರೋಗ ಹರಡಿದ ಹಿನ್ನೆಲೆ ಆಫ್‌ಲೈನ್ ಟಿಕೆಟ್ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ರಾಜ್ಯದಲ್ಲಿ ಕೋವಿಡ್ ಹರಡುವಿಕೆ ಕ್ಷೀಣಿಸುತ್ತಿರುವುದರಿಂದ ಆಫ್‌ಲೈನ್ ಟಿಕೆಟ್ ನೀಡುವ ಪ್ರಕ್ರಿಯೆಯನ್ನು ಪುನಶ್ಚೇತನಗೊಳಿಸಲು ದೇವಸ್ಥಾನ ಸಮಿತಿ ನಿರ್ಧರಿಸಿದೆ.

ತಿರುಪತಿ ತಿರುಮಲ ದೇವಾಲಯ
ತಿರುಪತಿ ತಿರುಮಲ ದೇವಾಲಯ

By

Published : Feb 14, 2022, 7:49 PM IST

ತಿರುಮಲ: ತಿರುಮಲ ಶ್ರೀವಾರಿ ಭಕ್ತರಿಗೆ ಕೊನೆಗೂ ಸಂತಸದ ಸುದ್ದಿ ಸಿಕ್ಕಿದೆ. ಫೆ.15ರಿಂದ ಅಂದರೆ ನಾಳೆಯಿಂದ ಸರ್ವದರ್ಶನ ಟೋಕನ್‌ಗಳನ್ನು ಆಫ್‌ಲೈನ್‌ನಲ್ಲಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೊರೊನಾ ಸಾಂಕ್ರಾಮಿಕ ರೋಗ ಹರಡಿದ ಹಿನ್ನೆಲೆ ಆಫ್‌ಲೈನ್ ಟಿಕೆಟ್ ನೀಡುವ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ರಾಜ್ಯದಲ್ಲಿ ಕೋವಿಡ್ ಹರಡುವಿಕೆ ಕ್ಷೀಣಿಸುತ್ತಿರುವುದರಿಂದ ಆಫ್‌ಲೈನ್ ಟಿಕೆಟ್ ನೀಡುವ ಪ್ರಕ್ರಿಯೆಯನ್ನು ಪುನಶ್ಚೇತನಗೊಳಿಸಲು ದೇವಸ್ಥಾನ ಸಮಿತಿ ನಿರ್ಧರಿಸಿದೆ.

ನಾಳೆ ಬೆಳಗ್ಗೆ 9 ಗಂಟೆಗೆ ಟೋಕನ್ ವಿತರಿಸಲಾಗುವುದು ಎಂದು ಇಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭೂದೇವಿ ಕಾಂಪ್ಲೆಕ್ಸ್, ಶ್ರೀನಿವಾಸಂ ಕಾಂಪ್ಲೆಕ್ಸ್ ಮತ್ತು ತಿರುಪತಿಯ ಶ್ರೀ ಗೋವಿಂದರಾಜಸ್ವಾಮಿ ಸತ್ರದಲ್ಲಿ ಸ್ಥಾಪಿಸಲಾದ ಕೌಂಟರ್‌ಗಳ ಮೂಲಕ ಟೋಕನ್‌ಗಳನ್ನು ಭಕ್ತರು ಪಡೆಯಬಹುದು.

ABOUT THE AUTHOR

...view details