ತಿರುಮಲ: ದೇಶದಲ್ಲೇ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ತಿರುಮಲ ಶ್ರೀವಾರಿ ದೇವಸ್ಥಾನ ಎರಡನೇ ಸ್ಥಾನದಲ್ಲಿದೆ ಎಂದು ಓಯೋ ಕಲ್ಚರಲ್ ಟ್ರಾವೆಲ್ ರಿಪೋರ್ಟ್ ಬಹಿರಂಗಪಡಿಸಿದೆ. ದೇಶಾದ್ಯಂತ ಭಕ್ತರು ಭೇಟಿ ನೀಡುವ ರಮಣೀಯ ಮತ್ತು ಪ್ರವಾಸಿ ಸ್ಥಳಗಳ ಕುರಿತು ಈ ಸಂಸ್ಥೆ ಸಮೀಕ್ಷೆ ನಡೆಸಿದೆ.
ಸಂಸ್ಥೆಯ ಪ್ರಕಾರ ವಾರಾಣಸಿ ಮೊದಲ ಸ್ಥಾನದಲ್ಲಿದ್ದು, ತಿರುಮಲ ಎರಡನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಸರ್ಕಾರ ಕೊರೊನಾ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ತಿರುಮಲ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ತಿರುಪತಿ ನಗರದಲ್ಲಿ ಟೂರಿಸ್ಟ್ ರೂಂ ಬುಕ್ಕಿಂಗ್ ಶೇ.233ರಷ್ಟು ಹೆಚ್ಚಾಗಿದೆ. ಮೂರನೇ ಸ್ಥಾನದಲ್ಲಿ ಶಿರಡಿ ದೇವಾಲಯವಿದೆ.
ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನ (ಟಿಟಿಡಿ) ಆಂಧ್ರಪ್ರದೇಶದ ವೆಂಕಟೇಶ್ವರನಿಗೆ ಸಮರ್ಪಿತವಾಗಿರುವ ಭಾರತದ ಅತ್ಯಂತ ಜನಪ್ರಿಯ, ಶ್ರೀಮಂತ, ಎರಡನೇ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ದೇವಾಲಯವಾಗಿದ್ದು, ಪ್ರತಿವರ್ಷ ಈ ದೇವಾಲಯಕ್ಕೆ ಕೋಟಿಗಟ್ಟಲೆ ಭಕ್ತರು ಭೇಟಿ ನೀಡುತ್ತಾರೆ.
ಭಾರತದ ಉದ್ದಕ್ಕೂ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಹೀಗೆ ಹಲವು ಧರ್ಮಗಳಿಗೆ ಸಂಬಂಧಪಟ್ಟ ಅದೆಷ್ಟೋ ದೇವಾಲಯಗಳಿವೆ. ಅದರಲ್ಲಿ ಮಿಲಿಯನ್ಗಟ್ಟಲೆ ಹಿಂದೂ ದೇವಾಲಯಗಳೇ ಇವೆ.