ಹೈದರಾಬಾದ್: ಕೊರೊನಾ ಸೋಂಕು ಮತ್ತೊಮ್ಮೆ ತನ್ನ ಅಟ್ಟಹಾಸ ಮೆರೆದಿದೆ. ಆಂಧ್ರ ಪ್ರದೇಶದ ತಿರುಮಲ ಧರ್ಮಗಿರಿ ವೇದಿಕ್ ಸ್ಕೂಲ್ನ ಸುಮಾರು 50 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸೋಂಕಿತ ವಿದ್ಯಾರ್ಥಿಗಳನ್ನು ತಿರುಪತಿಯ ಪದ್ಮಾವತಿ ಕೋವಿಡ್ ಕೇರ್ ಸೆಂಟರ್ಗೆ ರವಾನೆ ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ಕಾರಣದಿಂದ ಮುಚ್ಚಲ್ಪಟ್ಟಿದ್ದ ವೇದಶಾಲೆಯನ್ನು ಕೆಲವೇ ದಿನಗಳ ಹಿಂದೆ ತೆರೆಯಲಾಗಿತ್ತು.