ಡೆಹ್ರಾಡೂನ್ :ಮಾಜಿ ಸಿಎಂತ್ರಿವೇಂದ್ರ ಸಿಂಗ್ ರಾವತ್ ಬದಲಿಗೆಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ತಿರಥ್ ಸಿಂಗ್ ರಾವತ್ ಪ್ರಮಾಣ ವಚನ ಸ್ವೀಕರಿಸಿದರು.
ರಾಜ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಉತ್ತರಾಖಂಡದ ರಾಜ್ಯಪಾಲೆ ಬೇಬಿ ರಾಣಿ ಮೌರ್ಯ ಅವರು ಪ್ರಮಾಣ ವಚನ ಬೋಧಿಸಿದರು. ಸದ್ಯ ರಾವತ್ ಮಾತ್ರ ಪ್ರಮಾಣವಚನ ಸ್ವೀಕರಿಸಿದ್ದು, ಅವರ ಸಂಪುಟ ಸದಸ್ಯರು ನಂತರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭ ಓದಿ : ಕೇಂದ್ರ ಸರ್ಕಾರ vs ರೈತರು: ಪ್ರತಿಭಟನಾ ಸ್ಥಳದಲ್ಲೇ ರೈತನಿಂದ ಮನೆ ನಿರ್ಮಾಣ
ರಾವತ್, ಪ್ರಸ್ತುತ ಉತ್ತರಾಖಂಡದ ಪೌರಿ ಗರ್ವಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದಾರೆ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ. ಅವರು 2013 ರಿಂದ 15ರವರೆಗೆ ಉತ್ತರಾಖಂಡ ಬಿಜೆಪಿ ಘಟಕದ ಮುಖ್ಯಸ್ಥರಾಗಿದ್ದರು.
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿರುವ ಈ ಸಮಯದಲ್ಲಿ ಉತ್ತರಾಖಂಡದ ಅಧಿಕಾರವನ್ನು ತಿರಥ್ ಸಿಂಗ್ ರಾವತ್ ವಹಿಸಿಕೊಂಡಿದ್ದಾರೆ.
ಅಭಿನಂದನೆ ತಿಳಿಸಿದ ಪ್ರಧಾನಿ ಮೋದಿ :ನೂತನ ಮುಖ್ಯಮಂತ್ರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. "ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಿರಥ್ ಸಿಂಗ್ ರಾವತ್ ಅವರಿಗೆ ಅಭಿನಂದನೆಗಳು. ಅವರ ಆಡಳಿತದಲ್ಲಿ ರಾಜ್ಯವು ಪ್ರಗತಿಯ ಉತ್ತುಂಗಕ್ಕೆ ಏರಲಿದೆ ಎಂಬ ವಿಶ್ವಾಸ ನನಗಿದೆ." ಎಂದು ಮೋದಿ ಟ್ವೀಟ್ ಮಾಡಿದ್ದಾರೆ.