ಲಂಡನ್, ಬ್ರಿಟನ್:ಭಾರತದ ಇತಿಹಾಸಕ್ಕೆ ಸಂಬಂಧಿಸಿದ ಹಲವಾರು ಮಹತ್ವದ ಕುರುಹಗಳು ಬ್ರಿಟನ್ನಲ್ಲಿವೆ. ಅಲ್ಲಿನ ಹರಾಜಿನಲ್ಲಿರುವ ಟಿಪ್ಪು ಕಾಲಕ್ಕೆ ಸಂಬಂಧಿಸಿದ 10 ಮೀಟರ್ ಅಗಲದ ವರ್ಣಚಿತ್ರವೊಂದನ್ನು ಬುಧವಾರ ಸೋಥೆಬಿಸ್‌ನಲ್ಲಿ ಹರಾಜಿಗೆ ಇಡಲಾಗಿದೆ. 'ಬದುಕುಳಿದಿರುವ ವಸಾಹತುಶಾಹಿ ಸೋತಿರುವ ಶ್ರೇಷ್ಠ ಭಾರತೀಯ ಚಿತ್ರ' ಎಂಬುದಾಗಿ ಈ ವರ್ಣಚಿತ್ರವನ್ನು ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್ ಬಣ್ಣಿಸಿದ್ದರು ಎಂಬುದು ವಿಶೇಷ.
'ಆರ್ಟ್ಸ್ ಆಫ್ ದಿ ಇಸ್ಲಾಮಿಕ್ ವರ್ಲ್ಡ್ & ಇಂಡಿಯಾ' ಎಂಬ ಹೆಸರಿನಲ್ಲಿ ಹರಾಜು ನಡೆಯುತ್ತಿದ್ದು, ಈ ವರ್ಣಚಿತ್ರವೇ ಹರಾಜಿನ ಕೇಂದ್ರ ಬಿಂದುವಾಗಿದೆ. ಈ ವರ್ಣಚಿತ್ರದ ಮೌಲ್ಯ 5ರಿಂದ 8 ಕೋಟಿ ರೂಪಾಯಿಯಾಗಿದ್ದು, ಎರಡನೆಯ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಗೆದ್ದ ಕಾರಣದಿಂದಾಗಿ ಮೂರು ವರ್ಣಚಿತ್ರಗಳನ್ನು ರಚಿಸಲಾಗಿತ್ತು. ಅವುಗಳಲ್ಲಿ ಒಂದು ವರ್ಣಚಿತ್ರವನ್ನು 2010 ರಲ್ಲಿ ಸೋಥೆಬಿಸ್‌ನಲ್ಲಿ 769,250 ಫೌಂಡ್ಗೆ ಮಾರಾಟ ಮಾಡಲಾಗಿತ್ತು.
1780ರಲ್ಲಿ ನಡೆದ ಎರಡನೇ ಆಂಗ್ಲೋ-ಮೈಸೂರು ಯುದ್ಧವು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಮೈಸೂರಿನ ಆಡಳಿತಗಾರ ಹೈದರ್ ಅಲಿ ಮತ್ತು ಅವನ ಮಗ ಟಿಪ್ಪುವಿನ ಜಯ ಸಾಧಿಸಿದ್ದರು. ಈ ಯುದ್ಧದಲ್ಲಿ ಪೋಲಿಲೂರ್ ಕದನ ನಡೆದಿದ್ದು, ಆ ಕದನದ ಬಗ್ಗೆ ಈ ವರ್ಣಚಿತ್ರದಲ್ಲಿ ವಿವರಣೆ ನೀಡಲಾಗಿದೆ. ಬ್ರಿಟಿಷ್ ಸೇನೆಯನ್ನು ಮೈಸೂರಿನ ಪಡೆಗಳು ಸುತ್ತುವರೆದಿರುವುದು ಈ ವರ್ಣಚಿತ್ರದಲ್ಲಿ ಕಂಡುಬರುತ್ತದೆ. ಟಿಪ್ಪು ಮತ್ತು ಹೈದರ್ ಅಲಿ ಇಬ್ಬರೂ ಈ ಕದನದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಟಿಪ್ಪು ಆನೆಯ ಮೇಲೆ ಗುಲಾಬಿ ಹಿಡಿದುಕೊಂಡಿರುವುದು ಗೊತ್ತಾಗುತ್ತದೆ.