ಕರ್ನಾಟಕ

karnataka

ETV Bharat / bharat

ತ್ರಿಪುರಾದ ಎರಡನೇ ದೊಡ್ಡ ಪಕ್ಷ ತಿಪ್ರಾ ಮೋಥಾಗೆ ಬಿಜೆಪಿ ಮೈತ್ರಿ ಬಲೆ: ರಾಜಿ ಆಗಿಲ್ಲ ಎಂದ ಮಾಜಿ ರಾಜ - ತಿಪ್ರಾ ಮೋಥಾದ ನಾಯಕ ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮಾ

ತ್ರಿಪುರಾದಲ್ಲಿ ತಿಪ್ರಾ ಮೋಥಾ ಪಕ್ಷವು ತನ್ನ ಮೊದಲ ವಿಧಾನಸಭಾ ಚುನಾವಣೆಯಲ್ಲಿ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಮೈತ್ರಿಗಾಗಿ ತಿಪ್ರಾ ಮೋಥಾವನ್ನು ಬಿಜೆಪಿ ಸಂಪರ್ಕಿಸಿದೆ. ಆದರೆ, ಇದರ ಮಾತುಕತೆ ವಿಫಲವಾಗಿದೆ ಎಂದು ಹೇಳಲಾಗಿದೆ.

tipra-has-not-compromised-wait-and-watch-debbarma-former-tripura-royal-in-talks-with-bjp
ತ್ರಿಪುರಾದ ಎರಡನೇ ದೊಡ್ಡ ಪಕ್ಷ ತಿಪ್ರಾ ಮೋಥಾಗೆ ಬಿಜೆಪಿ ಮೈತ್ರಿ ಬಲೆ: ರಾಜಿ ಮಾಡಿಕೊಂಡಿಲ್ಲ ಎಂದ ಮಾಜಿ ರಾಜ

By

Published : Mar 8, 2023, 6:06 PM IST

ಅಗರ್ತಲಾ (ತ್ರಿಪುರಾ): ತ್ರಿಪುರಾದಲ್ಲಿ ಬಿಜೆಪಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿದೆ. ಇದೇ ವೇಳೆ ಎರಡನೇ ದೊಡ್ಡ ಪಕ್ಷವಾದ ತಿಪ್ರಾ ಮೋಥಾ ಜೊತೆಗೆ ಬಿಜೆಪಿ ಸಂಭಾವ್ಯ ಮೈತ್ರಿ ಕುರಿತು ಚರ್ಚೆ ನಡೆಯುತ್ತಿದೆ. ಇದರ ನಡುವೆ ಬಿಜೆಪಿ ಮೈತ್ರಿ ಬಗ್ಗೆ ಕಾದು ನೋಡಿ ಎಂದು ತ್ರಿಪುರಾದ ಮಾಜಿ ರಾಜ, ತಿಪ್ರಾ ಮೋಥಾದ ನಾಯಕ ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮಾ ಟ್ವೀಟ್​ ಮಾಡಿದ್ದು, ಕುತೂಹಲ ಮೂಡಿಸಿದೆ.

ಫೆಬ್ರವರಿಯಲ್ಲಿ ನಡೆದ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ 60 ಸ್ಥಾನಗಳ ಪೈಕಿ ಬಿಜೆಪಿ 32 ಸ್ಥಾನಗಳನ್ನು ಗೆದ್ದಿದೆ. ಆದರೆ, ಬಿಜೆಪಿ ಮಿತ್ರ ಪಕ್ಷವಾದ ಐಪಿಎಫ್‌ಟಿ ಕೇವಲ ಒಂದು ಸ್ಥಾನವನ್ನು ಪಡೆದುಕೊಂಡಿದೆ. ಮತ್ತೊಂದೆಡೆ, ತ್ರಿಪುರಾದಲ್ಲಿ ಮೂಲ ನಿವಾಸಿಗಳ ಹಕ್ಕುಗಳಿಗಾಗಿ ಪ್ರತಿಪಾದಿಸುತ್ತಿರುವ ತಿಪ್ರಾ ಮೋಥಾ, ತನ್ನ ಮೊದಲ ವಿಧಾನಸಭಾ ಚುನಾವಣೆಯಲ್ಲಿ 13 ಸ್ಥಾನಗಳನ್ನು ಗೆದ್ದು ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಬಿಜೆಪಿ ತನ್ನ ಅಧಿಕಾರವನ್ನು ಉಳಿಸಿಕೊಂಡಿದ್ದರೂ, ಟಿಪ್ರಾ ಮೋಥಾ ಪಕ್ಷದ ಪ್ರಭಾವಶಾಲಿ ಪ್ರದರ್ಶನ ತಲೆಬಿಸಿ ಮಾಡಿದೆ. ಇಷ್ಟೇ ಅಲ್ಲ, 2024ರ ಲೋಕಸಭಾ ಚುನಾವಣೆ ಬಗ್ಗೆಯೂ ಬಿಜೆಪಿಗೆ ಎಚ್ಚರಿಕೆ ಮತ್ತು ಚಿಂತೆಗೀಡು ಉಂಟು ಮಾಡುವಂತಾಗಿದೆ. ಹೀಗಾಗಿಯೇ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅಸಾಧಾರಣ ಪ್ರತಿಸ್ಪರ್ಧಿಯಾಗುವುದನ್ನು ತಡೆಯಲು ಕೇಸರಿ ಪಡೆ ಈಗಲೇ ಯೋಜನೆ ರೂಪಿಸುತ್ತಿದೆ.

ತಿಪ್ರಾ ಮೋಥಾಗೆ ಬಿಜೆಪಿ ಮೈತ್ರಿ ಬಲೆ: ತ್ರಿಪುರಾದಲ್ಲಿ ಸಿಪಿಐಎಂ 25 ವರ್ಷಗಳ ಕಾಲ ಸತತವಾಗಿ ಅಧಿಕಾರ ನಡೆಸಿತ್ತು. ಕಳೆದ ಎರಡು ಚುನಾವಣೆಗಳಿಂದ ಸಿಪಿಐಎಂ ಹಿಡಿತ ಸಡಿಲಗೊಂಡಿದೆ. ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ. ಇದರ ನಡುವೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತಿಪ್ರಾ ಮೋಥಾ 13 ಸ್ಥಾನಗಳನ್ನು ಪಡೆಯುವ ಮೂಲಕ ಗಮನಾರ್ಹ ಗೆಲುವು ದಾಖಲಿಸಿದೆ. ಆದ್ದರಿಂದ ಬಿಜೆಪಿ ತನ್ನ ನೇತೃತ್ವದ ಎನ್‌ಡಿಎ ವ್ಯಾಪ್ತಿಗೆ ತಿಪ್ರಾ ಮೋಥಾ ಸೇರಿಸಿಕೊಳ್ಳುವ ಆಲೋಚನೆಯಲ್ಲಿದೆ.

ಇದರ ಭಾಗವಾಗಿಯೇ ಬಿಜೆಪಿ ಮೈತ್ರಿಗಾಗಿ ತಿಪ್ರಾ ಮೋಥಾವನ್ನು ಸಂಪರ್ಕಿಸಿತ್ತು. ಆದರೆ, ಪ್ರತ್ಯೇಕ ರಾಜ್ಯಕ್ಕಾಗಿ ತಿಪ್ರಾ ಮೋಥಾದ ಬೇಡಿಕೆಯಿಂದಾಗಿ ಮೈತ್ರಿ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ 'ತಿಪ್ರಾ ರಾಜಿ ಮಾಡಿಕೊಂಡಿಲ್ಲ! ಕಾದು ನೋಡಿ' ಎಂದು ಮಾಜಿ ರಾಜ ದೆಬ್ಬರ್ಮಾ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್​ನೊಂದಿಗೆ ಪಕ್ಷದ ಅಧ್ಯಕ್ಷ ಬಿಕೆ ಹ್ರಾಂಗ್‌ಖಾಲ್ ಜೊತೆಗಿರುವ ಫೋಟೋವನ್ನೂ ಅವರು ಪೋಸ್ಟ್ ಮಾಡಿದ್ದಾರೆ.

ಮತ್ತೊಂದೆಡೆ, ತಿಪ್ರಾ ಮೋಥಾದ ಇಬ್ಬರು ನಾಯಕರು ಮತ್ತು ಹೊಸದಾಗಿ ಚುನಾಯಿತರಾದ 13 ಶಾಸಕರನ್ನು ಒಳಗೊಂಡ ನಿಯೋಗವು ಅಗರ್ತಲಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಕುತೂಹಲಕಾರಿ ವಿಷಯ ಎಂದರೆ, ಇಂದು ಬೆಳಗ್ಗೆ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಮತ್ತು ಎಂಟು ಜನ ಕ್ಯಾಬಿನೆಟ್ ಸಹೋದ್ಯೋಗಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭದಿಂದಲೂ ದೆಬ್ಬರ್ಮಾ ದೂರ ಉಳಿದಿದ್ದರು. ಟ್ವಿಟರ್ ಮೂಲಕ ಸಿಎಂ ಸಹಾ ಅವರಿಗೆ ಶುಭ ಹಾರೈಸಿದ್ದರು.

ಇದನ್ನೂ ಓದಿ:ಎರಡನೇ ಬಾರಿಗೆ ತ್ರಿಪುರಾ ಸಿಎಂ ಆಗಿ ಮಾಣಿಕ್​ ಸಹಾ ಪ್ರಮಾಣ

ABOUT THE AUTHOR

...view details