ನಾಗ್ಪುರ (ಮಹಾರಾಷ್ಟ್ರ):ರೈತ ಮುಖಂಡ ರಾಕೇಶ್ ಟಿಕಾಯತ್ ಫೆಬ್ರವರಿ 20 ರಂದು ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ''ಕಿಸಾನ್ ಮಹಾಪಂಚಾಯತ್'' ಮತ್ತು ಸಾರ್ವಜನಿಕ ರ‍್ಯಾಲಿ ನಡೆಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ಫೆಬ್ರವರಿ 20ರಂದು ಯವತ್ಮಾಲ್ ನಗರದ ಆಜಾದ್ ಮೈದಾನದಲ್ಲಿ ಕಿಸಾನ್ ಮಹಾಪಂಚಾಯತ್ ಮತ್ತು ಸಾರ್ವಜನಿಕ ಸಭೆಯಲ್ಲಿ ರಾಕೇಶ್ ಟಿಕಾಯತ್, ಯುದ್ವೀರ್ ಸಿಂಗ್ ಮತ್ತು ಎಸ್‌ಕೆಎಂನ ಹಲವಾರು ನಾಯಕರು ಭಾಗಿಯಾಗಲಿದ್ದಾರೆ ಎಂದು ಸಂಘಟನೆಯ ಮಹಾರಾಷ್ಟ್ರದ ಸಂಯೋಜಕ ಸಂದೀಪ್ ಗಿಡ್ಡೆ ತಿಳಿಸಿದ್ದಾರೆ.