ನವದೆಹಲಿ: ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವವರೆಗೂ ರೈತರು ಮನೆಗೆ ಮರಳುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಕೃಷಿ ಕಾನೂನುಗಳನ್ನು ಹಿಂಪಡೆಯುವವರೆಗೆ ಹೋರಾಟ ಮುಂದುವರೆಯುತ್ತೆ: ರಾಕೇಶ್ ಟಿಕಾಯತ್ ಘೋಷಣೆ - ರಾಕೇಶ್ ಟಿಕಾಯತ್
ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವವರೆಗೆ ರೈತರ ಹೋರಾಟ ಮುಂದುವರೆಯುತ್ತದೆ ಎಂದು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಸ್ಪಷ್ಟಪಡಿಸಿದ್ದಾರೆ.
ರೈತರು ಗುಂಪಿನಲ್ಲಿರುವುದರಿಂದ ಕೊರೊನಾ ಹೆಚ್ಚಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿರುವ ಅವರು, "ರೈತರು ತಮ್ಮ ಮನೆಯಲ್ಲಿದ್ದಾರೆ. ಬೇರೆಲ್ಲಿಗೆ ಹೋಗಬೇಕು, ಕೊರೊನಾ ಇಲ್ಲಿಂದ ಹರಡುತ್ತಿದೆಯೇ, ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆಯಲು ಅನೇಕ ರೈತರು ಹೆಣಗಾಡುತ್ತಿದ್ದಾರೆ. ಇಲ್ಲಿ ಲಸಿಕೆ ಶಿಬಿರ ಸ್ಥಾಪಿಸಲು ನಾವು ಅಧಿಕಾರಿಗಳಿಗೆ ಕೋರಿದ್ದೇವೆ.
ರೈತರು ಇಫ್ತಾರ್ನಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪವನ್ನೂ ಟಿಕಾಯತ್ ಅಲ್ಲಗಳೆದಿದ್ದಾರೆ. ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿ "ಜನರು ಪರಸ್ಪರ ದೂರದಲ್ಲಿ ಕುಳಿತಿದ್ದರು. 50 ಜನ ಸೇರಲು ಸರ್ಕಾರದಿಂದ ಅನುಮತಿ ಇದೆ. 22-35 ಜನರಿದ್ದರು. ಯಾರೂ ಪರಸ್ಪರ ಭೇಟಿಯಾಗಲಿಲ್ಲ, ಯಾರೂ ಕೈಕುಲುಕಲಿಲ್ಲ ಎಂದಿದ್ದಾರೆ.