ಇಂದೋರ್( ಮಧ್ಯಪ್ರದೇಶ): ಕಮಲಾ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿರುವ ಹುಲಿಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಈ ಪೈಕಿ ಒಂದು ಹುಲಿಮರಿ ಬಿಳಿ ಬಣ್ಣ ಹೊಂದಿರುವುದು ವಿಶೇಷವಾಗಿದೆ. ಗುರುವಾರ, ಉದ್ಯಾನವನದಲ್ಲಿ ರೇಬಿಸ್‌ನಿಂದ ಆರು ತೋಳಗಳು ಸಾವನ್ನಪ್ಪಿದ್ದು, ಮೃಗಾಲಯದ ಅಧಿಕಾರಿಗಳಲ್ಲಿ ಆತಂಕ ಉಂಟು ಮಾಡಿತ್ತು.
ಇದೀಗ ನಾಲ್ಕು ಹುಲಿಮರಿಗಳ ಜನನ ಮೃಗಾಲಯದ ಅಧಿಕಾರಿಗಳು, ಸಿಬ್ಬಂದಿಯಲ್ಲಿ ಸಂತಸ ಮೂಡಿಸಿದೆ. ಈ ಮೂಲಕ ಹುಲಿಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಈ ಹಿಂದೆ 8 ಹುಲಿಗಳು ಇಲ್ಲಿದ್ದವು.