ಚಂದ್ರಾಪುರ(ಮಹಾರಾಷ್ಟ್ರ):ಫಾರೆಸ್ಟ್ ಗಾರ್ಡ್(Forest guard) ಆಗಿ ಸೇವೆ ಸಲ್ಲಿಸುತ್ತಿದ್ದ ಮಹಿಳಾ ಸಿಬ್ಬಂದಿ ಸ್ವಾತಿ(Swati Dhumane) ದುಮಾನೆ ಎಂಬುವವರು ಅರಣ್ಯ ಪ್ರದೇಶದಲ್ಲಿ ಗಣತಿ ನಡೆಸುತ್ತಿದ್ದ ವೇಳೆ ಹುಲಿ ದಾಳಿಗೊಳಗಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಹುಲಿ ಗಣಿತಿಯ ಕಾರ್ಯದಲ್ಲಿ ಭಾಗಿಯಾಗಿದ್ದ ಮಹಿಳಾ ಫಾರೆಸ್ಟ್ ಗಾರ್ಡ್ ಸ್ವಾತಿ ಮಹಾರಾಷ್ಟ್ರದ ಟಡೋಬಾ ರಾಷ್ಟ್ರೀಯ ಉದ್ಯಾನದಲ್ಲಿ ಕರ್ತವ್ಯನಿರತರಾಗಿದ್ದರು. ಈ ವೇಳೆ ಹುಲಿಯಿಂದ ದಾಳಿಗೊಳಗಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸ್ವಾತಿ ಸಾವನ್ನಪ್ಪಿದ್ದಾರೆ.