ಕಾಂಗ್ರಾ (ಹಿಮಾಚಲ ಪ್ರದೇಶ):ಜಗತ್ತಿನಲ್ಲಿ ಶಾಂತಿ, ಸೌಹಾರ್ದತೆ ನೆಲೆಸಬೇಕು ಎಂಬ ಸಂದೇಶದೊಂದಿಗೆ ಟಿಬೆಟಿಯನ್ ಬೌದ್ಧ ಸನ್ಯಾಸಿಯೊಬ್ಬರು ಬಿಹಾರದ ಬೋಧಗಯಾದಿಂದ ಕಾಲ್ನಡಿಗೆಯಲ್ಲಿಯೇ ಹಿಮಾಚಲ ಪ್ರದೇಶದ ಧರ್ಮಶಾಲಾ ತಲುಪಿದರು. ಸುದೀರ್ಘ ಪಯಣ ಮೆಕ್ಲಿಯೋಡ್ಗಂಜ್ ತಲುಪಿದ ನಂತರ ಕೊನೆಗೊಂಡಿತು. ಇವರು ಗಯಾದಿಂದ ಧರ್ಮಶಾಲಾಕ್ಕೆ ಸುಮಾರು 8 ತಿಂಗಳ ಪ್ರಯಾಣ ಪೂರ್ಣಗೊಳಿಸಿದ್ದಾರೆ. ಇದೇ ಸಮಯದಲ್ಲಿ, ಟಿಬೆಟಿಯನ್ ಧಾರ್ಮಿಕ ನಾಯಕ ದಲೈ ಲಾಮಾ ಅವರನ್ನು ಭೇಟಿ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ.
ಕಾಲ್ನಡಿಗೆಯಲ್ಲಿ 2,100 ಕಿ.ಮೀ. ಪ್ರಯಾಣ:ಧರ್ಮಶಾಲಾದ ಮೆಕ್ಲಿಯೋಡ್‌ಗಂಜ್ ತಲುಪಿದ ಬೌದ್ಧ ಸನ್ಯಾಸಿ ಈ ನಡಿಗೆಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದು ಹೇಳಿದರು. ಅದರಲ್ಲೂ ಇತ್ತೀಚಿನ ದಿನಗಳ ರಣ ಬಿಸಿಲು ಅವರನ್ನು ತುಂಬಾ ಕಾಡಿದೆ. ಸುಡುಬಿಸಿಲಿನಲ್ಲಿ ಪ್ರಯಾಣ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಆದರೆ, ಶಾಖ ಧೈರ್ಯ ಮತ್ತು ಉತ್ಸಾಹ ಮುರಿಯಲು ಸಾಧ್ಯವಾಗಲಿಲ್ಲ. ಬೋಧಗಯಾದಿಂದ ಧರ್ಮಶಾಲಾದ ಮೆಕ್ಲಿಯೋಡ್‌ಗಂಜ್‌ವರೆಗೆ ಸುಮಾರು 2,100 ಕಿಲೋ ಮೀಟರ್‌ಗಳಷ್ಟು ದೂರವನ್ನು ಕಾಲ್ನಡಿಗೆಯಲ್ಲೇ ಎಂಟು ತಿಂಗಳುಗಳಲ್ಲಿ ಪ್ರಯಾಣಿಸಿದ್ದಾರೆ.