ಬಂಕಾ (ಬಿಹಾರ):ರೈಲು ಹಳಿ ದಾಟುವಾಗ ನಾವು ಅತ್ತಿತ್ತ ನೋಡಿ ಜಾಗರೂಕತೆಯಿಂದ ಸುರಕ್ಷಿತವಾಗಿ ದಾಟುತ್ತೇವೆ. ಆದ್ರೆಬಂಕಾ ಜಿಲ್ಲೆಯಲ್ಲಿ ಯುವಕರು ತಮ್ಮ ನಿರ್ಲಕ್ಷ್ಯದಿಂದ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ರೈಲಿಗೆ ಸಿಲುಕಿ ಮೂವರು ಯುವಕರು ಮೃತಪಟ್ಟಿದ್ದಾರೆ. ಜಿಲ್ಲೆಯ ಕಟೋರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಬಂಕಾ-ಜಸಿದಿಹ್ ರೈಲು ಮಾರ್ಗದ ಪಾಪರೆವಾ ಅರಣ್ಯದಲ್ಲಿ ಈ ಘಟನೆ ನಡೆದಿದೆ. ದಿಯೋಘರ್-ಅಗರ್ತಲಾ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದು ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಸುಸ್ತಾಗಿದ್ದ ಕಾರಣ ಮೂವರು ಯುವಕರು ಮನೆಗೆ ತೆರಳದೇ ರೈಲ್ವೇ ಹಳಿ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ರೈಲು ಬಂದಿರುವುದನ್ನು ಗಮನಿಸದೇ ಇರುವುದರಿಂದ ಈ ಅವಘಡ ಸಂಭವಿಸಿದೆ.
ರೈಲಿಗೆ ಸಿಲುಕಿ ಮೂವರು ಯುವಕರು ಸಾವು:ಮೃತ ಮೂವರೂ ಕಟೋರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಲೀಲಾಸ್ಥಾನ, ಉದಯಪುರ ಮತ್ತು ಪಾಪರೆವಾ ಪ್ರದೇಶದ ನಿವಾಸಿಗಳು ಆಗಿದ್ದಾರೆ. ಅವರನ್ನು ಮಾಣಿಕ್ಲಾಲ್ ಮುರ್ಮು, ಅರವಿಂದ ಮುರ್ಮು ಮತ್ತು ಸೀತಾರಾಮ್ ಮುರ್ಮು ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ, ಯುವಕರು ತಮ್ಮ ಸಂಬಂಧಿಕರನ್ನು ಕಳುಹಿಸಲು ಮತ್ತೊಂದು ಊರಿಗೆ ಹೋಗಿದ್ದರು. ನಂತರ ತಮ್ಮ ಮನೆಗೆ ಮರಳುತ್ತಿದ್ದರು. ಈ ವೇಳೆ ತುಂಬಾ ಸುಸ್ತಾಗಿ ಮೂವರು ಯುವಕರು ರೈಲ್ವೆ ಟ್ರ್ಯಾಕ್ನಲ್ಲೇ ನಿದ್ದೆಗೆ ಜಾರಿದ್ದಾರೆ. ಅಷ್ಟರಲ್ಲಿ ರೈಲು ಹಾದು ಹೋಗಿ ಅವಘಡ ಸಂಭವಿಸಿದೆ. "ಮೂವರು ಯುವಕರು ಆ ಕಡೆಯಿಂದ ಬರುತ್ತಿದ್ದರು. ಮನೆಗೆ ಹೋಗುವುದಾಗಿ ಹೇಳಿದ್ದರು. ಸ್ವಲ್ಪ ಸಮಯದ ಹಿಂದೆ ರೈಲಿಗೆ ಸಿಲುಕಿ ಸಾವೀಗಿಡಾಗಿರುವುದು ತಿಳಿದಿದೆ'' ಎಂದು ಹೇಳುತ್ತಾರೆ ಗ್ರಾಮಸ್ಥ ಉದಯ್ ಕುಮಾರ್.