ಕರ್ನಾಟಕ

karnataka

ETV Bharat / bharat

ತಂದೆಯೊಂದಿಗೆ ಕುರಿ ಮೇಯಿಸಲು ಹೋದ ಬಾಲಕ ನಾಪತ್ತೆ: ಅರಣ್ಯದಲ್ಲಿ ಶೋಧ - three years old boy missing

ನೆಲ್ಲೂರು ಜಿಲ್ಲೆಯ ಕಲುವಾಯಿ ವಲಯದ ಉಯಾಲಪಲ್ಲಿ ಗ್ರಾಮದ ಬುಡಕಟ್ಟು ಜನಾಂಗದ ಮೂರು ವರ್ಷದ ಬಾಲಕನೊಬ್ಬ ತನ್ನ ತಂದೆಯೊಂದಿಗೆ ಕುರಿ ಮೇಯಿಸಲು ಅರಣ್ಯಕ್ಕೆ ಹೋಗಿದ್ದಾಗ ಕಾಣೆಯಾಗಿದ್ದಾನೆ.

three years old boy missing
ಕುರಿ ಮೇಯಿಸಲು ಹೋದ ಪುಟ್ಟ ಬಾಲಕ ನಾಪತ್ತೆ

By

Published : Jul 4, 2021, 10:34 PM IST

ಆಂಧ್ರಪ್ರದೇಶ: ತನ್ನ ತಂದೆಯೊಂದಿಗೆ ಕುರಿಗಳನ್ನು ಮೇಯಿಸಲು ಅರಣ್ಯಕ್ಕೆ ಹೋಗಿದ್ದ ಬಾಲಕನೊಬ್ಬ ಕಾಣೆಯಾಗಿರುವ ಘಟನೆ ನೆಲ್ಲೂರು ಜಿಲ್ಲೆಯ ಕಲುವಾಯಿ ವಲಯದ ಉಯಾಲಪಲ್ಲಿ ಗ್ರಾಮದಲ್ಲಿ ನಡೆದಿದೆ.

ಉಯಾಲಪಲ್ಲಿ ಗ್ರಾಮದ ಬುಡಕಟ್ಟು ದಂಪತಿ ಬುಜ್ಜಯ್ಯ ಮತ್ತು ವರಲಕ್ಷ್ಮಿ ಅವರ ಮೂರು ವರ್ಷದ ಮಗ ಸಂಜು ಕಳೆದ 4 ದಿನಗಳ ಹಿಂದೆ ತನ್ನ ತಂದೆಯೊಂದಿಗೆ ಕುರಿಗಳನ್ನು ಮೇಯಿಸಲು ಅರಣ್ಯಕ್ಕೆ ಹೋಗಿದ್ದ. ತಂದೆಯೊಂದಿಗೆ ಓಡುತ್ತಿದ್ದ ಬಾಲಕ ಸ್ವಲ್ಪ ಸಮಯದ ನಂತರ ಕಾಣೆಯಾಗಿದ್ದಾನೆ.

ಇನ್ನು ಬಾಲಕನ ಪತ್ತೆಗಾಗಿ ಸರ್ಕಲ್ ಇನ್ಸ್‌ಪೆಕ್ಟರ್ ಗಂಗಾಧರ್, ಎಸ್‌ಐ ಅಂಜನೇಯ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ಸುಮಾರು 100 ಪೊಲೀಸ್ ಸಿಬ್ಬಂದಿ ಮೂರು ದಿನಗಳ ಕಾಲ ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಿದ್ದಾರೆ. ಆದರೂ ಯಾವುದೇ ಫಲಿತಾಂಶ ಲಭ್ಯವಾಗಿಲ್ಲ. ಡ್ರೋನ್ ಕ್ಯಾಮೆರಾವನ್ನು ಬಳಸಿ ಸಹ ಹುಡುಕಾಟ ನಡೆಸುತ್ತಿದ್ದು, ಪೊಲೀಸ್ ಸಿಬ್ಬಂದಿ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದಾರೆ.

ABOUT THE AUTHOR

...view details