ಚಂದ್ರಾಪುರ(ಮಹಾರಾಷ್ಟ್ರ): ಮಾನವ-ವನ್ಯಜೀವಿ ಸಂಘರ್ಷ ಅಲ್ಲಲ್ಲಿ ನಡೆಯುತ್ತಿರುತ್ತದೆ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ದುರ್ಗಾಪುರಲ್ಲಿಯೂ ಆಗಾಗ ಚಿರತೆ ದಾಳಿ ನಡೆಸಿ, ಆತಂಕ ಮೂಡಿಸುತ್ತದೆ. ಕೆಲ ದಿನಗಳ ಹಿಂದಷ್ಟೇ ಮಹಿಳೆಯೊಬ್ಬರು ಚಿರತೆಗೆ ಬಲಿಯಾಗಿದ್ದರು. ಬುಧವಾರ ರಾತ್ರಿ ಮೂರು ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ನಡೆದಿತ್ತು. ಆದರೆ ಆಕೆಯ ತಾಯಿ ಬಾಲಕಿಯನ್ನು ರಕ್ಷಿಸಿದ್ದಾರೆ.
ವಾರ್ಡ್ ನಂಬರ್ 1ರ ಮನೆಯೊಂದರಲ್ಲಿ ಬಾಲಕಿ ಊಟ ಮಾಡುತ್ತಿದ್ದ ವೇಳೆಯಲ್ಲಿ ಚಿರತೆ ದಾಳಿ ಮಾಡಿದೆ. ಚಿರತೆಯನ್ನು ಬಾಲಕಿಯ ತಾಯಿ ದೊಣ್ಣೆಯಿಂದ ಹೊಡೆದಿದ್ದಾರೆ. ಕಾಡಿನಲ್ಲಿ ಚಿರತೆ ಮರೆಯಾಗಿದೆ. ಅದೃಷ್ಟವಶಾತ್ ಬಾಲಕಿಯ ಜೀವ ಉಳಿದಿದ್ದು, ಗಾಯಗೊಂಡ ಆಕೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಘಟನೆಯಿಂದ ದುರ್ಗಾಪುರ ಪ್ರದೇಶದಲ್ಲಿ ಮತ್ತೊಮ್ಮೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಚಿರತೆ ಭೀತಿ ಇದೆ. ಚಿರತೆ ದಾಳಿಗೆ ಈವರೆಗೆ ಏಳಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಚಿರತೆಗಳು ವೃದ್ಧರು, ಮಹಿಳೆಯರು, ಮಕ್ಕಳನ್ನು ಬೇಟೆಯಾಡಿವೆ. ಈ ಪ್ರದೇಶದಲ್ಲಿರುವ ಮತ್ತಷ್ಟು ಕ್ರಮ ಕೈಗೊಳ್ಳಲು ನಿರಂತರ ಪ್ರಯತ್ನ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಭೇಟಿ ನೀಡಿದಾಗ ಗ್ರಾಮಸ್ಥರು ಅಧಿಕಾರಿಗಳನ್ನು ಸುತ್ತುವರೆದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿರತೆ ಸಾಯುವವರೆಗೂ ನಿಮ್ಮನ್ನು ಹೊರಗೆ ಬಿಡುವುದಿಲ್ಲ ಎಂದು ನಾಗರಿಕರು ಪಟ್ಟು ಹಿಡಿದ್ದು, ಚಿರತೆ ಹಿಡಿಯುವ ಭರವಸೆ ಮೇರೆಗೆ ಅಧಿಕಾರಿಗಳನ್ನು ನಾಗರಿಕರು ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿ:ಕಾವಲುಗಾರನಿಗೆ ಥಳಿಸಿ ಸುಧಾರಣಾ ಕೇಂದ್ರದಿಂದ ಪರಾರಿಯಾದ ಬಾಲ ಕೈದಿಗಳು ಸೆರೆ