ಸತಾರಾ( ಮಹಾರಾಷ್ಟ್ರ): ಬೀದಿ ನಾಯಿಗಳ ದಾಳಿಗೆ ಮೂರು ವರ್ಷದ ಬಾಲಕನೋರ್ವ ಮೃತಪಟ್ಟಿರುವ ಘಟನೆ ಕರದ್ ಜಿಲ್ಲೆಯ ಜಗತಾಪ್ ವಸ್ತಿ ಪ್ರದೇಶದಲ್ಲಿ ನಡೆದಿದೆ. ದಾಳಿ ವೇಳೆ ಮೃತಪಟ್ಟ ಬಾಲಕನನ್ನು ರಾಜ್ವೀರ್ ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನ ಬಾಲಕನ ತಾಯಿ ಹೊಲದಲ್ಲಿ ಕೆಲಸ ಮಾಡಲು ಹೋಗಿದ್ದರು. ಎಂದಿನಂತೆ ಬಾಲಕ ಮನೆಯಿಂದ ಸ್ವಲ್ಪ ದೂರದಲ್ಲಿ ಆಟವಾಡಲು ಹೋಗಿದ್ದಾನೆ.
ಬೀದಿ ನಾಯಿಗಳ ದಾಳಿ: ಮೂರು ವರ್ಷದ ಬಾಲಕ ಸಾವು - street dogs attccks to three year old boy in maharashtra
ಆಟವಾಡಲು ಹೋಗಿದ್ದ ಬಾಲಕನ ಮೇಲೆ ಏಕಾಏಕಿ ಬೀದಿನಾಯಿಗಳು ದಾಳಿ ನಡೆಸಿವೆ. ಪರಿಣಾಮ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಬೀದಿ ನಾಯಿಗಳ ದಾಳಿ: ಮೂರು ವರ್ಷದ ಬಾಲಕ ಸಾವು
ಈ ವೇಳೆ, ಹನ್ನೆರಡು ಹದಿನೈದು ಬೀದಿ ನಾಯಿಗಳು ಏಕಾಏಕಿ ರಾಜವೀರ್ನ ಮೇಲೆ ದಾಳಿ ನಡೆಸಿವೆ. ಇದರಿಂದ ಬಾಲಕನಿಗೆ ತೀವ್ರ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಬಾಲಕನ ಮೃತ ದೇಹವನ್ನು ಆಸ್ಪತ್ರಗೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated : Jun 28, 2022, 10:57 AM IST