ಬೊಂಗೈಗಾಂವ್ (ಅಸ್ಸಾಂ):ರೈಲು ಹರಿದು ತಾಯಿ ಮತ್ತು ಮಗಳ ಸೇರಿದಂತೆ ಮೂವರು ಮಹಿಳೆಯರು ಸಾವನ್ನಪ್ಪಿರುವ ದಾರುಣ ಘಟನೆ ಅಸ್ಸೋಂದ ಬೊಂಗೈಗಾಂವ್ ಜಿಲ್ಲೆಯಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ. ಮೃತರನ್ನು ಕಲ್ಪನಾ ಬರ್ಮನ್, ಆಕೆಯ ಪುತ್ರಿ ಪ್ರಿಯಾ ಬರ್ಮನ್ (11) ಮತ್ತು ಮತ್ತೊಬ್ಬ ಮಹಿಳೆಯನ್ನು ಮುನ್ನಾ ಎಂದು ಗುರುತಿಸಲಾಗಿದೆ.
ಬೊಂಗೈಗಾಂವ್-ಚಪ್ರಕಟ ರೈಲು ನಿಲ್ದಾಣದ ನಡುವಿನ ನೊವಾಪಾರಾ-2 ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ನಸುಕಿನಲ್ಲಿ ಮಹಿಳೆಯರಿಗೆ ವೇಗವಾಗಿ ಬಂದ ಗುವಾಹಟಿ - ಬೆಂಗಳೂರು ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ 11 ವರ್ಷದ ಪ್ರಿಯಾ ಸೇಮತ ಮೂವರು ಸಾವನ್ನಪ್ಪಿದ್ದಾರೆ. ಈ ಅಪಘಾತದ ಸುದ್ದಿ ತಿಳಿದು ಸುತ್ತಮುತ್ತಲ ಪ್ರದೇಶಗಳಲ್ಲಿ ಆತಂಕ ಮನೆ ಮಾಡಿದೆ.
ರೈಲ್ವೆ ಹಳಿ ದಾಟುತ್ತಿದ್ದಾಗ ಈ ದುರಂತ ಸಂಭವಿಸಿದೆಯೋ ಅಥವಾ ಬೇರೆ ಕಾರಣದಿಂದ ನಡೆದಿದೆಯೋ ಎಂಬ ಕುರಿತು ನಿಖರ ಇನ್ನೂ ತಿಳಿದುಬಂದಿಲ್ಲ. ಈ ಘಟನೆ ಮಾಹಿತಿ ಪಡೆದ ರೈಲ್ವೆ ಪೊಲೀಸರು ಹಾಗೂ ಬೋಂಗೈಗಾಂವ್ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಇಂಟರ್ಲಾಕಿಂಗ್, ಪುನರ್ ನಿರ್ಮಾಣ ಕಾಮಗಾರಿ: ಒಂದು ವಾರ ಬೆಂಗಳೂರು - ಮಂಗಳೂರು ರೈಲು ಸಂಚಾರ ರದ್ದು