ಪ್ರಕಾಶಂ (ಆಂಧ್ರಪ್ರದೇಶ):ಜಿಲ್ಲೆಯ ಮಾರ್ಕಪುರಂ ವಲಯದ ತಿಪ್ಪಯ್ಯಪಾಲೆಂ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಸುಟ್ಟು ಕರಕಲಾಗಿದೆ. ಕಾರಿನಲ್ಲಿದ್ದ ಮೂವರು ಸಜೀವ ದಹನವಾಗಿದ್ದಾರೆ.
ಭೀಕರ ರಸ್ತೆ ಅಪಘಾತ: ಧಗ - ಧಗನೆ ಹೊತ್ತಿ ಉರಿದ ಕಾರು, ಮೂವರು ಸಜೀವ ದಹನ - car and lorry collided in the Prakasham district
ROAD ACCIDENT IN PRAKASAM DISTRICT: ಆಂಧ್ರಪ್ರದೇಶದ ತಿಪ್ಪಯ್ಯಪಾಲೆಂ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಮೂವರು ಸಜೀವ ದಹನವಾಗಿದ್ದಾರೆ.
ಭೀಕರ ರಸ್ತೆ ಅಪಘಾತ
ಮೃತರು ಚಿತ್ತೂರು ಜಿಲ್ಲೆಯ ಭಾಕರಪೇಟೆಗೆ ಸೇರಿದವರು ಎಂದು ಗುರುತಿಸಲಾಗಿದೆ. ಮಾಹಿತಿ ಪಡೆದ ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಮೃತರ ವಿವರ ಇನ್ನಷ್ಟೇ ತಿಳಿಯಬೇಕಿದೆ. ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:ಅಬ್ಬಾ 3.2 ಕಿ.ಮೀ ಉದ್ದದ ಶೇಷನಾಗ.. ನಾಗ್ಪುರಕ್ಕೆ ಬರೋಬ್ಬರಿ 16 ಸಾವಿರ ಟನ್ ಕಲ್ಲಿದ್ದಲು ಸಾಗಣೆ! ಯಾರಿವರು ಶೇಷನಾಗ?