ಶ್ರೀಕಾಕುಲಂ (ಆಂಧ್ರಪ್ರದೇಶ): ಹೋಳಿ ಆಡಿ ಸಮುದ್ರದಲ್ಲಿ ಸ್ನಾನ ಮಾಡಲೆಂದು ತೆರಳಿದ ಮೂವರು ಯುವಕರು ನಾಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ನಡೆದಿದೆ.
ಕಳಿಂಗಪಟ್ಟಣಂ - ಮತ್ಸ್ಯಾಲೇಶಂ ಕರಾವಳಿ ಪ್ರದೇಶದಲ್ಲಿನ ಬೀಚ್ನಲ್ಲಿ ಒಟ್ಟು ಎಂಟು ಮಂದಿ ಸ್ನಾನಕ್ಕೆ ಹೋಗಿದ್ದರು. ಇವರಲ್ಲಿ ಆಶಿಶ್ ವರ್ಮಾ (18), ಚೋಟು (18) ಮತ್ತು ಸಂದೀಪ್ (18) ಎಂಬವರು ನಾಪತ್ತೆಯಾಗಿದ್ದಾರೆ.