ಚಿತ್ರಕೂಟ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಹೈ - ಸೆಕ್ಯುರಿಟಿ ಚಿತ್ರಕೂಟ್ ಜೈಲಿನೊಳಗೆ ನಡೆದ ಕೈದಿಗಳ ನಡುವಿನ ಗ್ಯಾಂಗ್ವಾರ್ನಲ್ಲಿ ಮೂವರು ಕೈದಿಗಳು ಸಾವನ್ನಪ್ಪಿದ್ದಾರೆ.
ಗ್ಯಾಂಗ್ಸ್ಟರ್ ಅನ್ಶ್ಯುಲ್ ದೀಕ್ಷಿತ್ ಎಂಬಾತ ಮುಖೀಮ್ ಕಲಾ ಎಂಬ ಕೈದಿಯ ಮೇಲೆ ಗುಂಡುಹಾರಿಸಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವೇಳೆ ಮತ್ತೋರ್ವ ಕೈದಿ ಮಿರಾಜುದ್ದೀನ್ ಕೂಡ ಗುಂಡೇಟಿಗೆ ಬಲಿಯಾಗಿದ್ದಾನೆ. ಘಟನೆ ವೇಳೆ, ಪೊಲೀಸರು ದೀಕ್ಷಿತ್ಗೆ ಶರಣಾಗುವಂತೆ ಕೇಳಿಕೊಂಡರು ನಿರಾಕರಿಸಿದ್ದರಿಂದ ಕೊನೆಗೆ ಪೊಲೀಸರು ದೀಕ್ಷಿತ್ಗೂ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಸಾವನಪ್ಪಿರುವ ಮಿರಾಜುದ್ದೀನ್ ಬಹುಜನ ಸಮಾಜವಾದಿ ಪಕ್ಷದ ಶಾಸಕ ಮುಖ್ತಾರ್ ಅನ್ಸಾರಿಯ ಆಪ್ತ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಚಿತ್ರಕೂಟ್ ಎಸ್ಪಿ, ಜೈಲಿನೊಳಗೆ ದೇಶಿಯ ನಿರ್ಮಿತ ಪಿಸ್ತೂಲ್ ಹೇಗೆ ಬಂದಿತು ಎಂಬುದರ ಕುರಿತು ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಚಿತ್ರಕೂಡ್ ಜೈಲಿನಲ್ಲಿ ಈ ರೀತಿಯ ಗ್ಯಾಂಗ್ ವಾರ್ ಇದಕ್ಕೂ ಮೊದಲೊಮ್ಮೆ ಸಂಭವಿಸಿತ್ತು. ಜುಲೈ 2018ರಲ್ಲಿ ದರೋಡೆಕೋರ ಮುನ್ನಾ ಭಜರಂಗಿ ಬಾಗಪತ್ ಜೈಲಿನಲ್ಲಿದ್ದ ಕೈದಿ ಸುನೀಲ್ ರತಿ ಎಂಬಾತನನ್ನು ಗುಂಡಿಕ್ಕಿ ಕೊಂದಿದ್ದ.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಬ್ಲ್ಯಾಕ್ ಫಂಗಸ್ಗೆ 52 ಮಂದಿ ಬಲಿ!