ಶ್ರೀನಗರ (ಜಮ್ಮು ಮತ್ತು ಕಾಶ್ಮೀರ)ಶೋಪಿಯಾನ್‌ನಲ್ಲಿ ಬುಧವಾರ ಪೊಲೀಸ್ ಹಾಗೂ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಈ ಮೂವರು ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿ (ಟಿಆರ್‌ಎಫ್) ಗೆ ಸೇರಿದ್ದು, ಈ ಹಿಂದೆ ದಾಳಿಗಳು ಮತ್ತು ನಾಗರಿಕ ದೌರ್ಜನ್ಯ ಸೇರಿದಂತೆ ಹಲವಾರು ಭಯೋತ್ಪಾದಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.
ಶೋಪಿಯಾನ್‌ನ ಚೋಳನ್ ಪ್ರದೇಶದಲ್ಲಿ ಭಯೋತ್ಪಾದಕರ ಇರುವಿಕೆ ತಿಳಿದು ಪೊಲೀಸ್ ಹಾಗೂ ಸಿಆರ್‌ಪಿಎಫ್ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿವೆ. ಶರಣಾಗುವಂತೆ ತಿಳಿಸಿದರೂ ಗುಂಡು ಹಾರಿಸಿದ ಹಿನ್ನೆಯಲ್ಲಿ ಎನ್ಕೌಂಟರ್ ನಡೆಸಿ ಉಗ್ರರನ್ನು ಹತ್ಯೆ ಮಾಡಲಾಗಿದೆ. ಉಗ್ರರು ಸೋಪಿಯಾನ್ ಮೂಲದವರೇ ಎಂದು ಗುರುತಿಸಲಾಗಿದ್ದು, ಎಲ್‌ಇಟಿ ಸಂಘಟನೆಗೆ ಸೇರಿಕೊಂಡಿದ್ದರು.