ಡಾರ್ಜಿಲಿಂಗ್ (ಪಶ್ಚಿಮ ಬಂಗಾಳ):ಉತ್ತರ ಬಂಗಾಳದ ನದಿ ಪಾತ್ರದಲ್ಲಿ ಸೋಮವಾರ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ವೇಳೆಯಲ್ಲಿ ಮೂವರು ಬಾಲಕರು ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆಯಿಂದ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸ್ ಮತ್ತು ಆಡಳಿತದ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿವೆ.
ಪೊಲೀಸರ ಗಮನಕ್ಕೆ ಬಾರದೇ ರಾತ್ರಿಯ ಕತ್ತಲಲ್ಲಿ ಬಾಲಕಾರ್ಮಿಕರು ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದಿದ್ದು, ಹೇಗೆ ಎಂಬ ಪ್ರಶ್ನೆ ಎದ್ದಿದೆ. ಕಳ್ಳಸಾಗಾಣಿಕೆದಾರರೊಂದಿಗೆ ಪೊಲೀಸ್ ಆಡಳಿತ ಶಾಮೀಲಾಗಿದೆ ಎಂಬ ಆರೋಪ ಕೂಡಾ ಮುನ್ನೆಲೆಗೆ ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ರೋಹಿತ್ ಚೌಹಾಣ್ (15), ಶ್ಯಾಮಲ್ ಸಹಾನಿ (15) ಹಾಗೂ ಮನು ಕುಮಾರ್ (16) ನದಿಪಾತ್ರದಲ್ಲಿ ನೀರು ಪಾಲಾಗಿದ್ದಾರೆ. ಎಲ್ಲರೂ ಸಿಲಿಗುರಿಯ ಪಕ್ಕದ ಮಟಿಗರ ಬನಿಯಾಖಾಡಿ ಗ್ರಾಮದ ನಿವಾಸಿಗಳಾಗಿದ್ದಾರೆ.
ಮರಣೋತ್ತರ ಪರೀಕ್ಷೆ:ಸೋಮವಾರ ಬೆಳಗ್ಗೆ ಪೊಲೀಸರು ಜೆಸಿಬಿಯೊಂದಿಗೆ ಸ್ಥಳಕ್ಕೆ ಧಾವಿಸಿ ಗಾಯಾಗೊಂಡ ಒಬ್ಬನನ್ನು ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ. ಜೊತೆಗೆ ಮೂವರು ಬಾಲಕರ ಶವಗಳನ್ನು ಹೊರಗೆ ತೆಗೆದು ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದರು. ವಿಷಯ ತಿಳಿದು, ಸಿಲಿಗುರಿ ಮೇಯರ್ ಗೌತಮ್ ದೇವ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ರಾತ್ರಿವೇಳೆ ಅಕ್ರಮ ಮರಳು ಗಣಿಗಾರಿಕೆ:ಸ್ಥಳೀಯ ಮೂಲಗಳ ಪ್ರಕಾರ, ಜನವರಿಯಿಂದ ನದಿಪಾತ್ರಗಳನ್ನು ಮುಚ್ಚಲಾಗಿದೆ. ಇದರಿಂದ ಅನೇಕ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಆದರೆ, ರಾತ್ರಿ ವೇಳೆ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿತ್ತು. ಭಾನುವಾರ ತಡರಾತ್ರಿ ಸ್ಥಳೀಯ ವ್ಯಕ್ತಿ ಗಣೇಶ್ ಸರ್ದಾರ್ ಎಂಬುವರು ಸೇರಿದಂತೆ ನಾಲ್ವರು ಬಾಲಕರು ನದಿಯಲ್ಲಿ ಮರಳು ಅಗೆಯಲು ತೆರಳಿದ್ದರು. ಮಧ್ಯರಾತ್ರಿ 2 ಗಂಟೆಯ ಹೊತ್ತಿಗೆ ಎಲ್ಲರೂ ಹಿಂತಿರುಗಿದರು.