ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಮತ್ತೆ ಏರಿಕೆ ಕಂಡ ಕೋವಿಡ್​: ಮೂರು ರಾಜ್ಯಗಳಲ್ಲಿ ನಿರ್ಬಂಧ ಪುನಾರಂಭ

ದೇಶದ ಹಲವೆಡೆ ದಿನೇ ದಿನೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಕೆಲವು ರಾಜ್ಯಗಳು ಕಡ್ಡಾಯವಾಗಿ ಕೋವಿಡ್​ ನಿರ್ಬಂಧಕ ಕ್ರಮಗಳ ಜಾರಿಗೆ ಮುಂದಾಗಿವೆ.

ಕೋವಿಡ್​ ಪರೀಕ್ಷೆ
ಕೋವಿಡ್​ ಪರೀಕ್ಷೆ

By

Published : Apr 9, 2023, 5:56 PM IST

ನವದೆಹಲಿ: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಒಟ್ಟು 5,357 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. ಇದರ ನಡುವೆ ದೇಶದ ಹಲವಾರು ರಾಜ್ಯಗಳಲ್ಲಿ ಸಾರ್ವಜನಿಕರು ಕಡ್ಡಾಯ ಮಾಸ್ಕ್ ಸೇರಿದಂತೆ ಇತರೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿವೆ.

ಕೆಲವು ದಿನಗಳಿಂದ ಕೋವಿಡ್ ಪ್ರಕರಣಗಳ ನಿರಂತರ ಏರಿಕೆಯು ದೇಶದಲ್ಲಿ ಆತಂಕ ಮೂಡಿಸುತ್ತಿದೆ. ಏಪ್ರಿಲ್ 1 ರಂದು 2,994, ಏಪ್ರಿಲ್ 2 ರಂದು 3,824, ಏಪ್ರಿಲ್ 3 ರಂದು 3,641, ಏಪ್ರಿಲ್ 4 ರಂದು 3,038, ಏಪ್ರಿಲ್ 5 ರಂದು 4,435, ಏಪ್ರಿಲ್ 6 ರಂದು 5,335 ಮತ್ತು ಏಪ್ರಿಲ್ 6,050 ರಂದು ಏಪ್ರಿಲ್ 8 ರಂದು 6,155 ಸೋಂಕು ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹರಿಯಾಣ- ಮಾಸ್ಕ್‌ ಧರಿಸಲು ಸೂಚನೆ: ದೇಶದಲ್ಲಿ ಸದ್ಯ 32,814 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಪಾಸಿಟಿವಿಟಿ ಪ್ರಮಾಣ ಶೇ​ 3.39 ರಷ್ಟಿದೆ. ಸೋಂಕು ಹರಡುವಿಕೆ ಪ್ರಮಾಣವನ್ನು ತಡೆಯುವ ಸಲುವಾಗಿ ಹರಿಯಾಣ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಇತ್ತೀಚೆಗೆ, ರಾಜ್ಯದ ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಕೋವಿಡ್​ ನಿರ್ಬಂಧಕ ಕ್ರಮಗಳನ್ನು ಅನುಸರಿಸುವಂತೆ ತಿಳಿಸಿದೆ.

ಕೇರಳದಲ್ಲೂ ಮಾಸ್ಕ್ ಕಡ್ಡಾಯ:ಕೇರಳದಲ್ಲಿ ಕೋವಿಡ್​ ಪ್ರಕರಣಗಲು ಹೆಚ್ಚಾಗುತ್ತಿದ್ದು ರಾಜ್ಯ ಸರ್ಕಾರವು ವೃದ್ಧರು, ಗರ್ಭಿಣಿಯರು ಮತ್ತು ಇತರೆ ಜೀವನಶೈಲಿಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿದೆ. ಕೋವಿಡ್ ಪ್ರಕರಣಗಳ ಹೆಚ್ಚಳದ ಕುರಿತು ಉನ್ನತ ಮಟ್ಟದ ಸಭೆಯ ನಂತರ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸುದ್ದಿಗಾರರೊಂದಿಗೆ ಮಾತನಾಡಿ, ವೈರಲ್ ಕಾಯಿಲೆಯಿಂದ 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಇತರೆ ಜೀವನಶೈಲಿ ಕಾಯಿಲೆಗಳಿಂದ ಬಳಲುತ್ತಿರುವವರು ಸಾವನ್ನಪ್ಪುತ್ತಿದ್ದಾರೆ. ಅವರಿಗೆ ಸಮರ್ಪಕವಾಗಿ ಆಮ್ಲಜನಕ ಪೂರೈಕೆ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವಾಗಿ ತಿಳಿಸಿದರು.

ಪುದುಚೇರಿಯನ್ನೂ ಕ್ರಮ:ಪುದುಚೇರಿ ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಇಲ್ಲಿನ ಆಸ್ಪತ್ರೆಗಳು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಮನರಂಜನಾ ಕ್ಷೇತ್ರಗಳಂತಹ ಸ್ಥಳಗಳಲ್ಲಿ ಕೆಲಸ ಮಾಡುವ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿಸಲಾಗಿದೆ.

ಉತ್ತರ ಪ್ರದೇಶ, ದೆಹಲಿಯಲ್ಲಿ ಕೋವಿಡ್ ಕ್ರಮ: ಉತ್ತರ ಪ್ರದೇಶ ಸರ್ಕಾರವು ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಪರೀಕ್ಷಿಸುವಂತೆ ಖಡಕ್ ಸೂಚನೆ ನೀಡಿದೆ. ದೆಹಲಿಯಲ್ಲಿ ಕೊರೊನಾ ಆಸ್ಪತ್ರೆಗಳು ಮತ್ತು ಇತರ ವೈದ್ಯಕೀಯ ಸೌಲಭ್ಯಗಳ ಪರೀಕ್ಷೆಯನ್ನು ಹೆಚ್ಚಿಸಲು ತಿಳಿಸಲಾಗಿದೆ. ತಜ್ಞರ ಪ್ರಕಾರ, ದೆಹಲಿಯಲ್ಲಿ ಕೋವಿಡ್ ಹೆಚ್ಚಳಕ್ಕೆ ಹೊಸ XBB.1.16 ರೂಪಾಂತರ ಕಾರಣವಾಗಿದೆ.

ಇದನ್ನೂ ಓದಿ:ಕೋವಿಡ್​ ಕೇಸ್ ಮತ್ತೆ​ ಹೆಚ್ಚಳ: ಕಳೆದ 24 ಗಂಟೆಯಲ್ಲಿ 5,357 ಹೊಸ ಪ್ರಕರಣಗಳು ದಾಖಲು

ABOUT THE AUTHOR

...view details