ಕರ್ನಾಟಕ

karnataka

ETV Bharat / bharat

ಐವರು ಶಾಲಾ ಮಕ್ಕಳ ಮೇಲೆ ಹರಿದ ಕಾರ್; ಸ್ಥಳದಲ್ಲೇ ಮೂವರು ಸಾವು..! - ಗ್ರಾಮಸ್ಥರಿಂದ ರಸ್ತೆ ತಡೆ

ಆಗ್ರಾದಲ್ಲಿ ಐವರು ಶಾಲಾ ಮಕ್ಕಳಿಗೆ ಕಾರ್ ಹರಿದ ಪರಿಣಾಮ, ಈ ಪೈಕಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ಮಕ್ಕಳು ರಸ್ತೆ ಬದಿಯಲ್ಲಿ ಶಾಲಾ ಬಸ್‌ಗಾಗಿ ಕಾಯುತ್ತಿರುವ ವೇಳೆ ಈ ದುರ್ಘಟನೆ ನಡೆದಿದೆ. ಇನ್ನಿಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.

Etv Bharat
ಐವರು ಶಾಲಾ ಮಕ್ಕಳ ಮೇಲೆ ಹರಿದ ಕಾರ್; ಸ್ಥಳದಲ್ಲೇ ಮೂವರು ಸಾವು

By

Published : May 11, 2023, 3:49 PM IST

ಆಗ್ರಾ (ಉತ್ತರ ಪ್ರದೇಶ):ನಿಯಂತ್ರಣ ತಪ್ಪಿದ ಕಾರ್​ ಒಂದು ರಸ್ತೆಬದಿಯಲ್ಲಿ ಶಾಲಾ ಬಸ್‌ಗಾಗಿ ಕಾಯುತ್ತಿದ್ದ ಮಕ್ಕಳಿಗೆ ಡಿಕ್ಕಿ ಹೊಡೆದಿರುವ ಘಟನೆ ಆಗ್ರ ಜಿಲ್ಲೆಯ ದೌಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ರಸ್ತೆ ಅಪಘಾತದಲ್ಲಿ ಮೂವರು ಅಮಾಯಕ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿವೆ. ಇನ್ನು ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ರಸ್ತೆ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು. ಆಕ್ರೋಶಗೊಂಡ ಗ್ರಾಮಸ್ಥರು ಫತೇಹಾಬಾದ್-ಆಗ್ರಾ ರಸ್ತೆ ತಡೆ ನಡೆಸಿದರು. ಇದರಿಂದ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ಉದ್ದನೇಯ ಸಾಲು ಕಂಡುಬಂತು. ಕಾರ್​ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಹಲವು ಮಹಿಳೆಯರನ್ನು ಮದುವೆಯಾಗಿ ವಂಚಿಸಿದ ನಕಲಿ ಎನ್​ಸಿಬಿ ಅಧಿಕಾರಿ

ಗ್ರಾಮಸ್ಥರಿಂದ ರಸ್ತೆ ತಡೆ:ಗುರುವಾರ ಬೆಳಗ್ಗೆ ಎಂಟು ಗಂಟೆಗೆ ಆಗ್ರಾದಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ರೂಪೇಶ್ ಅವರ ಮಗಳು ಪ್ರೀತಿ, ಗುಜನ್, ಪುತ್ರ ನಮನ್, ಪುತ್ರ ಅರವಿಂದ್ ಮತ್ತು ಪರಮಹಂಸರ ಮಗಳು ಲಾವಣ್ಯ ಮತ್ತು ಪ್ರಜ್ಞಾ ಶಾಲೆಗೆ ಹೋಗಲು ಶಾಲಾ ಬಸ್‌ಗಾಗಿ ರಸ್ತೆ ಬದಿಯಲ್ಲಿ ನಿಂತಿದ್ದರು. ಆಗ ಫತೇಹಾಬಾದ್ ಕಡೆಯಿಂದ ವೇಗವಾಗಿ ಬಂದ ಕಾರ್​ ಐವರು ಮಕ್ಕಳ ಮೇಲೆ ಹರಿದಿದೆ.

ಇದನ್ನೂ ಓದಿ:ಗಾಂಧಿನಗರದಲ್ಲಿ ಬಸ್ ಗುದ್ದಿ 10 ಮಂದಿ ಸ್ಥಳದಲ್ಲೇ ಸಾವು

ರಸ್ತೆಬದಿ ನಿಂತಿದ್ದ ಇತರೆ ಮಕ್ಕಳು ಓಡಿ ಹೋಗಿ ಪ್ರಾಣ ಉಳಿಸಿಕೊಂಡರು. ಉಳಿದ ಮಕ್ಕಳು ಗ್ರಾಮಕ್ಕೆ ಬಂದು ಅಪಘಾತದ ಬಗ್ಗೆ ಸಂಬಂಧಿಕರಿಗೆ ತಿಳಿಸಿದರು. ಮಕ್ಕಳ ಮೇಲೆ ಕಾರ್​ ಹರಿದ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದರು. ಗ್ರಾಮಸ್ಥರು ರಸ್ತೆ ತಡೆ ಮಾಡಿದ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ:ಮಲಪ್ಪುರಂ ದೋಣಿ ದುರಂತ: 22 ಜನ ಸಾವಿನ ನಂತರ ಆರೋಪಿ ಬಂಧನ

ಪೊಲೀಸರು ಹೇಳಿದ್ದೇನು?:ಆಗ್ರಾದಲ್ಲಿ ನಡೆದ ರಸ್ತೆ ಅಪಘಾತದ ಬಗ್ಗೆ ಮಾಹಿತಿ ನೀಡಿದ ಎಸಿಪಿ ಫತೇಹಾಬಾದ್ ಸೌರಭ್ ಸಿಂಗ್ ಅವರು, ಸ್ಪ್ರಿಂಗ್ ಫೀಲ್ಡ್ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದ ಐವರು ಮಕ್ಕಳ ಮೇಲೆ ಹರಿದಿದೆ. ರಸ್ತೆ ಅಪಘಾತದಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಅಪಘಾತಕ್ಕೆ ಕಾರಣವಾದ ಕಾರ್​ನ್ನು ವಶಪಡೆದುಕೊಳ್ಳಲಾಗಿದೆ. ರಸ್ತೆ ತಡೆ ಕೈಬಿಡುವಂತೆ ಗ್ರಾಮಸ್ಥರ ಜೊತೆಗೆ ಮಾತುಕತೆ ನಡೆಸಲಾಗಿದೆ. ಪೊಲೀಸರು ಕಾರ್​ ಚಾಲಕನನ್ನು ಬಂಧಿಸಿದ್ದಾರೆ ಎಂದು ಎಸಿಪಿ ಫತೇಹಾಬಾದ್ ಸೌರಭ್ ಸಿಂಗ್ ತಿಳಿಸಿದರು. ಕುಟುಂಬದವರ ದೂರಿನ ಮೇರೆಗೆ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ:ಮತಾಂತರಿಸಿ ದುಬೈನಲ್ಲಿ ಮದುವೆಯಾಗಿ ಯುವತಿಗೆ ವಂಚನೆ; ನ್ಯಾಯಕ್ಕಾಗಿ ಪ್ರತಿಭಟನೆ

ಇದನ್ನೂ ಓದಿ:ಕೇರಳ ವೈದ್ಯೆ ಕೊಂದ ಕುಡುಕ ಹಂತಕನಿಗೆ 14 ದಿನ ನ್ಯಾಯಾಂಗ ಬಂಧನ, ಕೊಲೆ ಕಾರಣ ನಿಗೂಢ

ABOUT THE AUTHOR

...view details