ಕರ್ನಾಟಕ

karnataka

ETV Bharat / bharat

ಎರಡು ಕುಟುಂಬಗಳ ನಡುವೆ ಗುಂಡಿನ ಚಕಮಕಿ: ಒಂದೇ ಗುಂಪಿನ ಮೂವರ ಹತ್ಯೆ, ಇನ್ನಿಬ್ಬರಿಗೆ ಗಂಭೀರ ಗಾಯ - ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತ

ಮಾಹಿತಿ ಪ್ರಕಾರ ಗ್ರಾಮದ ವಿಜೇಂದ್ರ ಹಾಗೂ ಧರ್ಮೇಂದ್ರ ಅವರ ಕುಟುಂಬದ ನಡುವೆ ಹಿಂದಿನಿಂದಲೂ ಪೈಪೋಟಿ ಇತ್ತು ಎನ್ನಲಾಗಿದೆ. ಗುರುವಾರ ಸಂಜೆ ಎರಡೂ ಕಡೆಯವರ ನಡುವೆ ಜಗಳವಾಗಿದೆ. ಎರಡು ಕಡೆಯಿಂದ ಗುಂಡಿನ ಚಕಮಕಿ ನಡೆದಿದೆ.

three-person-of-same-family-died-in-firing-between-two-parties
ಎರಡು ಕುಟುಂಬಗಳ ನಡುವೆ ಗುಂಡಿನ ಚಕಮಕಿ

By

Published : Oct 13, 2022, 7:43 PM IST

ಭರತಪುರ(ರಾಜಸ್ಥಾನ):ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಜಿಲ್ಲೆಯ ಪಟಾಯಿನಾ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಗುಂಡಿನ ದಾಳಿಗೆ ಇಬ್ಬರು ಸಹೋದರರು ಮತ್ತು ತಂದೆ ಸೇರಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎದುರಾಳಿ ಗುಂಪಿನ ಇನ್ನಿಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆರ್‌ಬಿಎಂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಹಿತಿ ಪ್ರಕಾರ ಗ್ರಾಮದ ವಿಜೇಂದ್ರ ಹಾಗೂ ಧರ್ಮೇಂದ್ರ ಅವರ ಕುಟುಂಬದ ನಡುವೆ ಹಿಂದಿನಿಂದಲೂ ಪೈಪೋಟಿ ಇತ್ತು ಎನ್ನಲಾಗಿದೆ. ಗುರುವಾರ ಸಂಜೆ ಎರಡೂ ಕಡೆಯವರ ನಡುವೆ ಜಗಳವಾಗಿದೆ. ಎರಡು ಕಡೆಯಿಂದ ಗುಂಡಿನ ಚಕಮಕಿ ನಡೆದಿದೆ. ಆದರೆ ಒಂದು ಕಡೆಯ ವಿಜೇಂದ್ರ (55) ಮತ್ತು ಅವರ ಇಬ್ಬರು ಮಕ್ಕಳಾದ ಹೇಮು (28) ಮತ್ತು ಕಿಶನ್ (24) ಎಂಬುವರು ಗುಂಡಿನ ದಾಳಿಯಲ್ಲಿ ಅಸು ನೀಗಿದ್ದಾರೆ.

ಘಟನೆಯಲ್ಲಿ ಇನ್ನೊಂದು ಬದಿಯ ಸತ್ಯೇಂದ್ರ ಮತ್ತು ಧರ್ಮೇಂದ್ರ ಎಂಬುವರಿಗೂ ಗಾಯಗಳಾಗಿವೆ. ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಆರ್‌ಬಿಎಂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನು ಓದಿ:ತೃತೀಯಲಿಂಗಿಗಳ ಮೇಲೆ ಹಲ್ಲೆ ಮಾಡಿ ಕೂದಲು ಕತ್ತರಿಸಿದ ವಿಡಿಯೋ ವೈರಲ್​: ಇಬ್ಬರ ಬಂಧನ

ABOUT THE AUTHOR

...view details