ಕರ್ನಾಟಕ

karnataka

ETV Bharat / bharat

ಶಿವನ ಪೂಜೆಗೆ ತೆರಳಿ ಹಿಂತಿರುಗಿ ಬರುವಾಗ ದಾರುಣ ಅಂತ್ಯ ಕಂಡ ಮಕ್ಕಳು - ಮೂವರು ಮಕ್ಕಳು ಸಾವು

ಪರ್ವತದ ಮೇಲಿರುವ ಶಿವನ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ವಾಪಸ್​ ಬರುತ್ತಿದ್ದಾಗ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದು ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ.

died due to fall in well
died due to fall in well

By

Published : Jul 27, 2021, 3:11 PM IST

ಚಿಂದ್ವಾರ್​(ಮಧ್ಯಪ್ರದೇಶ):ಶಿವನ ದೇಗುಲಕ್ಕೆ ತೆರಳಿ ಹಿಂತಿರುಗಿ ಬರುತ್ತಿದ್ದ ವೇಳೆ ಸಮತೋಲನ ಕಳೆದುಕೊಂಡು ಬಾವಿಗೆ ಬಿದ್ದಿರುವ ಪರಿಣಾಮ ಮೂವರು ಮಕ್ಕಳು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಈಗಾಗಲೇ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯಪ್ರದೇಶದ ಚಿಂದ್ವಾರ್​​ನಲ್ಲಿ ಈ ಘಟನೆ ನಡೆದಿದೆ. ಸೋಮವಾರ ಮಧ್ಯಾಹ್ನ ಮನೆಯಿಂದ ಹೋಗಿರುವ ಮೂವರು ಮಕ್ಕಳು ಗಾರ್ಬೆಟಾದಲ್ಲಿನ ಶಿವನ ದೇವಸ್ಥಾನಕ್ಕೆ ತೆರಳಿದ್ದರು. ಯಶ್​ ಸಾಹು, ಕಾರ್ತಿಕ್​ ವರ್ಮಾ ಹಾಗೂ ಶ್ರೇಯಸ್​ ಯಾದವ್​​ ಒಟ್ಟಿಗೆ ತೆರಳಿ ಪೂಜೆ ಸಲ್ಲಿಸಿದ್ದರು. ಇದಾದ ಬಳಿಕ ಸೈಕಲ್​ ಮೇಲೇರಿ ಅಲ್ಲಿಂದ ವಾಪಸ್​ ಬರುತ್ತಿದ್ದ ಸಂದರ್ಭ ಏಕಾಏಕಿ ನಿಯಂತ್ರಣ ಕಳೆದುಕೊಂಡು, ಪರ್ವತದ ಕೆಳಗಿನ ಸಣ್ಣ ಬಾವಿಗೆ ಬಿದ್ದರು.

ಇದನ್ನೂ ಓದಿ: ರಾಜ್ ​ಕುಂದ್ರಾಗೆ ಜೈಲೇ ಗತಿ..14 ದಿನ ನ್ಯಾಯಾಂಗ ಬಂಧನಕ್ಕೆ ಕೋರ್ಟ್​​ ಆದೇಶ

ಮಕ್ಕಳು ಮನೆಗೆ ಬಾರದ ಕಾರಣ ಪೋಷಕರು ರಾತ್ರಿಯಿಡೀ ಹುಡುಕಾಟ ನಡೆಸಿದ್ದಾರೆ. ಆದರೆ ಇವರ ಬಗ್ಗೆ ಸುಳಿವು ಸಿಗದ ಕಾರಣ ಬೆಳಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದಾಗ ಅವರ ಸೈಕಲ್​​ ಪರ್ವತದ ಕೆಳಗಿನ ಬಾವಿ ಹೊರಗೆ ಬಿದ್ದಿರುವುದು ಕಂಡು ಬಂದಿದೆ. ಅಲ್ಲಿಗೆ ಹೋಗಿ ನೋಡಿದಾಗ ಯಶ್​, ಕಾರ್ತಿಕ್​ ಹಾಗೂ ಶ್ರೇಯಸ್​ ಮೃತದೇಹಗಳು ಸಿಕ್ಕಿವೆ. ಒಂದೇ ದಿನ ಮೂವರು ಮಕ್ಕಳು ಸಾವನ್ನಪ್ಪಿರುವುದು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮಸ್ಥರು ಕೂಡ ಆಘಾತಕ್ಕೊಳಗಾಗಿದ್ದಾರೆ.

ABOUT THE AUTHOR

...view details