ಕರ್ನಾಟಕ

karnataka

ETV Bharat / bharat

ಕಾಶ್ಮೀರಿ ಪಂಡಿತರಿಗೆ ಗುಂಡಿಕ್ಕಿ ಕೊಂದಿದ್ದ ಮೂವರು ಉಗ್ರರನ್ನು ಬೇಟೆಯಾಡಿದ ಭದ್ರತಾ ಪಡೆ - ಕಾಶ್ಮೀರಿ ಪಂಡಿತ ಕ್ರಿಶನ್ ಭಟ್

ಜಮ್ಮು ಕಾಶ್ಮೀರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಮೊರೆತದಲ್ಲಿ ಮೂವರು ಉಗ್ರರ ತಲೆ ಉರುಳಿಸಲಾಗಿದೆ. ಕಾಶ್ಮೀರಿ ಪಂಡಿತರ ಹತ್ಯೆ ಕೇಸಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

three-millitants-killed
ಮೂವರು ಉಗ್ರರು ಮಟಾಶ್​

By

Published : Dec 20, 2022, 9:37 AM IST

ಶೋಪಿಯಾನ್​(ಜಮ್ಮು- ಕಾಶ್ಮೀರ):ಕಾಶ್ಮೀರಿ ಪಂಡಿತರೊಬ್ಬರ ಹತ್ಯೆ ಮಾಡಿದ ಮೂವರು ಉಗ್ರರನ್ನು ಸೇನಾಪಡೆಗಳು ಇಂದು ಬೆಳಗ್ಗೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮಜ್ಮಾರ್ಗ್ ಝೈನಾಪುರ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿವೆ.

ಕಾಶ್ಮೀರಿ ಪಂಡಿತ ಕ್ರಿಶನ್ ಭಟ್​ರನ್ನು ಉಗ್ರರು ಅಕ್ಟೋಬರ್ 15 ರಂದು ಚೌದ್ರಿಗುಂಡ್ ಶೋಪಿಯಾನ್‌ನಲ್ಲಿ ಬಂದೂಕು ಹಾರಿಸಿ ಕೊಂದಿದ್ದರು. ನಂತರ ಉಗ್ರರ ಬೇಟೆಗೆ ಸೇನಾಪಡೆಗಳು ಜಾಲ ಬೀಸಿದ್ದವು.

ಇಂದು ಶೋಪಿಯಾನ್​ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಮಾಹಿತಿ ತಿಳಿದು ಸೇನಾ ಪಡೆಗಳು ಕಾರ್ಯಾಚರಣೆಗಿಳಿದಿದ್ದವು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಉಗ್ರರಿಂದ ಎಕೆ 47 ರೈಫಲ್ ಮತ್ತು ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಓದಿ:1971ರ ಯುದ್ಧದ ಹೀರೋ, ವೀರಸೇನಾನಿ ಭೈರೋನ್​ ಸಿಂಗ್​ ರಾಥೋಡ್ ನಿಧನ

ABOUT THE AUTHOR

...view details