ಸೋಪೋರ್(ಜಮ್ಮು ಕಾಶ್ಮೀರ):ಗಣರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ದೇಶದ ಅಲ್ಲಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುವಂತೆ ಭಾಸವಾಗುತ್ತಿದ್ದು, ಸೇನೆಯೂ ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಸಫಲವಾಗುತ್ತಿದೆ.
ಸೋಪೋರ್ನಲ್ಲಿ ಲಷ್ಕರ್ ಎ ತೋಯ್ಬಾದ ಮೂವರು ಓವರ್ ಗ್ರೌಂಡ್ ವರ್ಕರ್ಗಳನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದು, ಕೆಲವು ಶಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತಂತೆ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಜನವರಿ 11ರಂದು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮಾಹಿತಿಗೆ ಈಗ ಬಹಿರಂಗವಾಗಿದೆ. ಸೋಪೋರ್ ಪೊಲೀಸ್, 22 ರಾಷ್ಟ್ರೀಯ ರೈಫಲ್ಸ್, ಸಿಆರ್ಪಿಎಫ್ನ 179 ಬೆಟಾಲಿಯನ್ ಬೋಮೈ ಪೊಲೀಸ್ ಠಾಣೆ ವ್ಯಾಪ್ತಿಯ ದರ್ಪೋರಾ ಬಳಿಯ ಚೀನಾರ್ ಬಳಿ ತಪಾಸಣೆ ನಡೆಸುತ್ತಿದ್ದಾಗ ಮೂವರನ್ನು ಬಂಧಿಸಲಾಗಿದೆ.
ಗುಂದ್ಬ್ರಾಥ್ ಗ್ರಾಮದಿಂದ ಆ ಮೂವರು ಭಯೋತ್ಪಾದಕರು ಬೊಮೈ ಕಡೆಗೆ ತೆರಳುತ್ತಿದ್ದರು. ಅವರು ಅನುಮಾನಾಸ್ಪದವಾಗಿ ಕಂಡು ಬಂದ ಕಾರಣ, ನಿಲ್ಲುವಂತೆ ಪೊಲೀಸರು ಸೂಚನೆ ನೀಡಿದರು. ಈ ವೇಳೆ, ಅವರು ಪರಾರಿಯಾಗಲು ಯತ್ನಿಸಿದ್ದರೂ, ಆದರೂ ಪಟ್ಟು ಬಿಡದ ಸೇನೆ ಮೂವರನ್ನೂ ಬಂಧಿಸಿದೆ.