ಮುಂಬೈ: ಕೊರೊನಾ ಹಿನ್ನೆಲೆ ಅನೇಕ ಕುಟುಂಬಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿವೆ. ಪರಿಣಾಮ, ಅನೇಕರು ತಮ್ಮ ಜೀವನವನ್ನೂ ಕೊನೆಗೊಳ್ಳಿಸಿಕೊಳ್ಳಲು ಸಹ ಮುಂದಾಗಿದ್ದಾರೆ. ಮುಂಬೈನ ಸೆಕ್ಟರ್ 6ರ ವಾಶಿಯಲ್ಲಿ ಇದೇ ರೀತಿಯ ಘಟನೆ ನಡೆದಿದೆ.
ಆರ್ಥಿಕ ಬಿಕ್ಕಟ್ಟಿನಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ - Three died by corona
ಕೊರೊನಾ ಬಡವರ ಪಾಲಿಗಂತೂ ಕರಾಳ ಮುಖದ ದರ್ಶನ ಮಾಡಿಸಿದೆ. ಮೂರೊತ್ತಿನ ಊಟಕ್ಕೆ ಕಷ್ಟಪಡುತ್ತಿದ್ದವರು ಈಗ ಒಂದೊತ್ತಿನ ಊಟಕ್ಕೂ ಸಂಕಷ್ಟಪಡುವ ಕಾಲ ಬಂದಿದೆ. ಕೊರೊನಾ ಬಂದು ಕೆಲವರು ಸಾವಿಗೀಡಾದರೆ,ಕೊರೊನಾ ಪರಿಣಾಮ ನೂರಾರು ಜನ ತಮಗೆ ತಾವೇ ಪ್ರಾಣ ಕಳೆದುಕೊಂಡಿದ್ದಾರೆ..
ಆರ್ಥಿಕ ಬಿಕ್ಕಟ್ಟಿನಿಂದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಆರ್ಥಿಕ ಮುಗ್ಗಟ್ಟಿನಿಂದ ಒಂದೇ ಕುಟುಂಬದ ಮೂವರು ವಿಷ ಸೇವಿಸಿದ್ದಾರೆ. ತಾಯಿ ಮೋಹಿನಿ ಕಮ್ವಾನಿ (87), ಮಗ ದಿಲೀಪ್ ಕಮ್ವಾನಿ (67) ಮತ್ತು ಮಗಳು ಕಾಂತಾ ಕಮ್ವಾನಿ (63) ವಿಷ ಸೇವಿಸಿ ಅಸ್ವಸ್ಥರಾಗಿದ್ದರು. ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ವಾಶಿಯಲ್ಲಿರುವ ಮುನ್ಸಿಪಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಿನ್ನೆ ಬೆಳಗ್ಗೆ ತಾಯಿ, ರಾತ್ರಿ ಚಿಕಿತ್ಸೆ ವೇಳೆ ಮಕ್ಕಳು ಸಾವಿಗೀಡಾಗಿದ್ದಾರೆ. ಈ ಮೂವರೂ ಹಿರಿಯ ನಾಗರಿಕರಾಗಿದ್ದರು.