ಜಮ್ಮು ಮತ್ತು ಕಾಶ್ಮೀರ:ನಾಗರಿಕರ ಹತ್ಯೆಗೆ ಕಾರಣವಾಗಿದ್ದ ಮೂವರು ಉಗ್ರರನ್ನು ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ನಲ್ಲಿ ಸೆರೆ ಹಿಡಿದಿದ್ದಾರೆ. ಇವರು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಮತ್ತು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ದ ಸದಸ್ಯರು ಎಂದು ಗುರುತಿಸಲಾಗಿದೆ. ಬಂಧಿತರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಮೂವರ ಹೈಬ್ರಿಡ್ ಉಗ್ರರ ಸೆರೆ ಹೈಬ್ರೋಡ್ ಉಗ್ರರಾದ ಲತೀಫ್ ರಾಥರ್, ಅರ್ಷಿದ್ ಅಹ್ಮದ್ ಭಟ್ ಮತ್ತು ಇನ್ನೋರ್ವನನ್ನು ಬಂಧಿಸಲಾಗಿದೆ. ಬಂಧಿತ ಉಗ್ರ ಲತೀಫ್ ರಾಥರ್ ತಹಸೀಲ್ ಕಚೇರಿಯ ಉದ್ಯೋಗಿಯಾಗಿದ್ದ ರಾಹುಲ್ ಭಟ್ ಮತ್ತು ಟಿವಿ ನಟನಾಗಿದ್ದ ಅಮರೀನ್ ಭಟ್ ಸೇರಿದಂತೆ ಹಲವು ನಾಗರಿಕ ಹತ್ಯೆಗಳಲ್ಲಿ ಭಾಗಿಯಾಗಿದ್ದ. ಮೇ 26 ರಂದು ಇಬ್ಬರ ಕೊಲೆ ಮಾಡಲಾಗಿತ್ತು.
ಇವರ ಪತ್ತೆಗೆ ಬಲೆ ಬೀಸಿದ್ದ ಭದ್ರತಾ ಪಡೆಗಳಿಗೆ ಉಗ್ರರು ಬುದ್ಗಾಮ್ನಲ್ಲಿ ಅಡಗಿರುವ ಮಾಹಿತಿ ದೊರೆತ ತಕ್ಷಣವೇ ಬುಧವಾರ ಬೆಳಗಿನ ಜಾವವೇ ದಾಳಿಗೆ ಇಳಿದರು. ಈ ವೇಳೆ, ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯಿತು. ಬಳಿಕ ಮೂವರನ್ನು ಸುತ್ತುವರೆದ ಯೋಧರು ಜೀವಂತವಾಗಿ ಅವರನ್ನು ಬಂಧಿಸಿದರು.
ಮೂವರು ಹೈಬ್ರಿಡ್ ಉಗ್ರರಾಗಿದ್ದು, ಎಇಟಿ, ಟಿಆರ್‌ಎಫ್ ಸಂಘಟನೆ ಜೊತೆ ಗುರುತಿಸಿಕೊಂಡಿದ್ದರು. ಸೆರೆ ಹಿಡಿದ ಬಳಿಕ ಇವರಿಂದ 5 ಪಿಸ್ತೂಲ್, 5 ಮ್ಯಾಗಜೀನ್‌ಗಳು, 50 ಗುಂಡುಗಳು, ಎರಡು ಹ್ಯಾಂಡ್ ಗ್ರೆನೇಡ್‌ಗಳು ಸೇರಿದಂತೆ ಇನ್ನಿತರ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಓದಿ:ಬಿಹಾರ ಮಹಾಮೈತ್ರಿ ಸರ್ಕಾರಕ್ಕೆ ಕ್ಷಣಗಣನೆ.. ಲಾಲು ಪುತ್ರರಿಗೆ ಮತ್ತೆ ಅಧಿಕಾರ