ಕರ್ನಾಟಕ

karnataka

ETV Bharat / bharat

ಒಳನುಸುಳಲು ಯತ್ನ: ಕುಪ್ವಾರದಲ್ಲಿ ಮೂವರು ಎಲ್‌ಇಟಿ ಉಗ್ರರ ಹತ್ಯೆಗೈದ ಸೇನೆ - ಕುಪ್ವಾರ ಎನ್‌ಕೌಂಟರ್‌

ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಎಲ್‌ಇಟಿ ಉಗ್ರರು ಹತರಾಗಿದ್ದಾರೆ.

LeT
LeT

By

Published : May 26, 2022, 8:49 AM IST

ಕುಪ್ವಾರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಜುಮಗುಂಡ್ ಗ್ರಾಮದಲ್ಲಿ ಇಂದು ಮುಂಜಾನೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಗ್ರಾಮದೊಳಗೆ ಉಗ್ರರು ಒಳನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಎನ್‌ಕೌಂಟರ್ ಪ್ರಾರಂಭಿಸಲಾಗಿದೆ. ಹತ್ಯೆಗೀಡಾದ ಮೂವರು ಭಯೋತ್ಪಾದಕರು ಲಷ್ಕರ್-ಎ-ತೈಬಾ (ಎಲ್‌ಇಟಿ) ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಕಾಶ್ಮೀರದ ಐಜಿಪಿ, "ಮೂವರು ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಇವರು ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿಗೆ ಸೇರಿದವರಾಗಿದ್ದಾರೆ. ಇವರ ಗುರುತು ಪತ್ತೆಯಾಗಿಲ್ಲ. ಶಸ್ತ್ರಾಸ್ತ್ರ ಸೇರಿದಂತೆ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ತಿಳಿಸಿದರು.

ಬುದ್ಗಾಮ್ ಜಿಲ್ಲೆಯಲ್ಲಿ ಮೂವರು ಎಲ್‌ಇಟಿ ಉಗ್ರರು ಮಹಿಳಾ ಟಿವಿ ಕಲಾವಿದೆಯೊಬ್ಬರನ್ನು ಗುಂಡಿಕ್ಕಿ ಕೊಂದು, ಆಕೆಯ ಅಪ್ರಾಪ್ತ ಸೋದರಳಿಯನನ್ನು ಗಾಯಗೊಳಿಸಿದ ಒಂದು ದಿನದ ನಂತರ ಭಾರತೀಯ ಭದ್ರತಾ ಪಡೆಗಳು ಮೂವರು ಉಗ್ರರನ್ನು ಹೊಡೆದುರುಳಿಸಿವೆ.

ಇದನ್ನೂ ಓದಿ:ಗಡಿಯಲ್ಲಿ ಸೇನೆ ಭರ್ಜರಿ ಕಾರ್ಯ; ನೌಗಾಮ್‌ನಲ್ಲಿ ಮೂವರು ಎಲ್‌ಇಟಿ ಉಗ್ರರ ಹತ್ಯೆ

ABOUT THE AUTHOR

...view details