ಕರ್ನಾಟಕ

karnataka

ETV Bharat / bharat

ದೋಣಿ ಮಗುಚಿ ಮೂವರ ಸಾವು ಮೂವರ ನಾಪತ್ತೆ.. ತೀವ್ರಗೊಂಡ ಶೋಧ - ಬಿಹಾರದ ಗೋಪಾಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿ

ಗಂಗಾನದಿಯಲ್ಲಿ ಮುಗುಚಿದ ದೋಣಿ: ದೋಣಿ ಮಗುಚಿದ್ದರಿಂದ ಅದರಲ್ಲಿದ್ದವರು ಮುಳುಗಿದರೆ, ಈಜು ಬಲ್ಲವರು ನೀರಿನಿಂದ ಈಜಿದರೆ, ಇನ್ನು ಕೆಲವರು ಪರದಾಡುತ್ತಿರುವುದು ಕಂಡು ಬಂತು. ಅಪಘಾತದಲ್ಲಿ ಇಲ್ಲಿಯವರೆಗೆ ಮೂವರು ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Three killed, three missing as boat capsized in Bhagalpur
ದೋಣಿ ಮುಗುಚಿ ಮೂವರ ಸಾವು ಮೂವರ ನಾಪತ್ತೆ.. ತೀವ್ರಗೊಂಡ ಶೋಧ

By

Published : Oct 27, 2022, 6:38 AM IST

ಭಾಗಲ್ಪುರ(ಬಿಹಾರ): ಗಂಗಾನದಿಯಲ್ಲಿ ಬುಧವಾರ ಸಂಜೆ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಮೂವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಹಾರದ ಗೋಪಾಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಅಭಿಯಾ ಗ್ರಾಮದ ಕಲ್ಬಲಿಯಾ ಘಾಟ್ ಬಳಿ ಈ ಅಪಘಾತ ಸಂಭವಿಸಿದೆ.

ದೋಣಿಯಲ್ಲಿ ಅನೇಕ ಜನರು ಇದ್ದರು ಎಂದು ತಿಳಿದು ಬಂದಿದೆ. ಕೆಲವು ಕಾರ್ಮಿಕರು ತಮ್ಮ ಮನೆಗೆ ಹಿಂದಿರುಗುತ್ತಿದ್ದರು ಮತ್ತೆ ಕೆಲವರು ಕಾಳಿ ಪೂಜೆಗಾಗಿ ಆಯೋಜಿಸಲಾದ ಜಾತ್ರೆಯನ್ನು ವೀಕ್ಷಿಸಲು ತೆರಳುತ್ತಿದ್ದರು ಎನ್ನಲಾಗಿದೆ. ಗಂಗಾನದಿಯಲ್ಲಿ ದೋಣಿ ಮಗುಚಿ ಬಿದ್ದ ತಕ್ಷಣ ಅದರಲ್ಲಿದ್ದವರು ನೀರಿನಲ್ಲಿ ಮುಳುಗಿದರು. ಈಜು ಬಲ್ಲವರು ನೀರಿನಿಂದ ಈಜಿದರೆ, ಇನ್ನು ಕೆಲವರು ಪರದಾಡುತ್ತಿರುವುದು ಕಂಡು ಬಂತು. ಅಪಘಾತದಲ್ಲಿ ಇಲ್ಲಿಯವರೆಗೆ ಮೂವರು ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಪಾಲಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಇನ್ನು ನಾಪತ್ತೆಯಾದವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: ಅಪ್ರಾಪ್ತ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ಬಂಧನ

ABOUT THE AUTHOR

...view details