ಸೋಲಾಪುರ:ಮೃತದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯುತ್ತಿರುವಾಗ ಅಪಘಾತ ಸಂಭವಿಸಿ ಒಂದೇ ಕುಟುಂದ ಮೂವರು ಸಾವನ್ನಪ್ಪಿದ್ದು, 13 ಜನ ಗಾಯಗೊಂಡಿರುವ ಘಟನೆ ಇಲ್ಲಿನ ಹೆದ್ದಾರಿಯಲ್ಲಿ ನಡೆದಿದೆ.
ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದ್ ಮೂಲಕ ಕುಟುಂಬ ತಮ್ಮ ಮನೆಯ ಸದಸ್ಯರ ಚಿಕಿತ್ಸೆಗೆ ಸೊಲ್ಲಾಪುರಕ್ಕೆ ತೆರಳಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಸ್ವಗ್ರಾಮಕ್ಕೆ ಮೃತದೇಹವನ್ನು ಸೊಲ್ಲಾಪುರದಿಂದ ಹೈದರಾಬಾದ್ ತೆಗೆದುಕೊಂಡು ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.