ಶ್ರೀನಗರ (ಜಮ್ಮು-ಕಾಶ್ಮೀರ): ಭಾರತದ ಗಡಿಯೊಳಗೆ ನುಸುಳುತ್ತಿದ್ದ ಮೂವರು ಉಗ್ರರನ್ನು ಸೇನೆ ಇಂದು ಹೊಡೆದುರುಳಿಸಿದೆ. ಜಮ್ಮು-ಕಾಶ್ಮೀರದ ಉರಿಯ ಕಮಲ್ಕೋಟ್ ಸೆಕ್ಟರ್ನಲ್ಲಿ ಘಟನೆ ನಡೆದಿದೆ. ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಮೂವರು ಒಳನುಸುಳುಕೋರರ ಸದೆಬಡಿದ ಸೇನೆ - ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು
ಜಮ್ಮು-ಕಾಶ್ಮೀರದ ಉರಿಯ ಕಮಲ್ಕೋಟ್ ಸೆಕ್ಟರ್ನಲ್ಲಿ ದೇಶದೊಳಗೆ ಅಕ್ರಮವಾಗಿ ನುಸುಳುತ್ತಿದ್ದ ಮೂವರು ಉಗ್ರರನ್ನು ಭಾರತೀಯ ಸೇನೆ ಹತ್ಯೆಗೈದಿದೆ.
ಜಮ್ಮು ಕಾಶ್ಮೀರದಲ್ಲಿ ಮೂವರು ಒಳನುಸುಳುಕೋರರ ಸೆದೆಬಡಿದ ಸೇನೆ
ಮೂವರು ಭಯೋತ್ಪಾದಕರು ಕಮಲ್ಕೋಟ್ ಸೆಕ್ಟರ್ನ ಮದಿಯಾನ್ ನಾನಕ್ ಪೋಸ್ಟ್ ಸಮೀಪ ಅಕ್ರಮವಾಗಿ ಒಳನುಸುಳಲು ಯತ್ನಿಸುತ್ತಿದ್ದರು. ಭಾರತೀಯ ಸೇನೆಯ ಸಿಬ್ಬಂದಿ ಹಾಗೂ ಬರಮುಲ್ಲಾ ಪೊಲೀಸರು ಮೂವರನ್ನು ಅಲ್ಲಿಯೇ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಹೆರಾಯಿನ್ ಸಾಗಿಸುತ್ತಿದ್ದ ಪಾಕ್ ವ್ಯಕ್ತಿಗೆ ಸೇನೆ ಗುಂಡೇಟು.. 8 ಕೆಜಿ ಮಾದಕವಸ್ತು ವಶ
Last Updated : Aug 25, 2022, 3:03 PM IST