ಕರ್ನಾಟಕ

karnataka

ETV Bharat / bharat

ಜಮ್ಮು-ಕಾಶ್ಮೀರದಲ್ಲಿ ಮೂರು ತಲೆಯ ವಿಷ್ಣುವಿನ ಪುರಾತನ ವಿಗ್ರಹ ಪತ್ತೆ - ಝೇಲಂ ನದಿ

ಲೆಲ್ಹಾರ್ ಗ್ರಾಮಸ್ಥರು ಬುಧವಾರ ಝೇಲಂ ನದಿಯಲ್ಲಿ ಝೇಲಂ ಮರಳು ಎತ್ತುತ್ತಿದ್ದಾಗ ವಿಷ್ಣುವಿನ ಪುರಾತನ ವಿಗ್ರಹ ಪತ್ತೆಯಾಗಿದೆ. ನಂತರ ಈ ಬಗ್ಗೆ ಗ್ರಾಮಸ್ಥರೇ ಪುಲ್ವಾಮಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ವಿಷ್ಣುವಿನ ವಿಗ್ರಹ ಪತ್ತೆ
Lord Vishnu idol recovered in Jammu and Kashmir

By

Published : Mar 31, 2022, 7:40 PM IST

ಪುಲ್ವಾಮಾ (ಜಮ್ಮು-ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಝೇಲಂ ನದಿಯಲ್ಲಿ ಮೂರು ತಲೆಯ ವಿಷ್ಣುವಿನ ಪುರಾತನ ವಿಗ್ರಹ ಪತ್ತೆಯಾಗಿದ್ದು, ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ನಿರ್ದೇಶನಾಲಯಕ್ಕೆ ಪೊಲೀಸರು ಹಸ್ತಾಂತರಿಸಿದ್ದಾರೆ.

ಪುಲ್ವಾಮಾ ಜಿಲ್ಲೆಯ ಕಾಕಪೋರಾದ ಲೆಲ್ಹಾರ್ ಗ್ರಾಮಸ್ಥರು ಬುಧವಾರ ಝೇಲಂ ನದಿಯಲ್ಲಿ ಝೇಲಂ ಮರಳು ಎತ್ತುತ್ತಿದ್ದಾಗ ವಿಷ್ಣುವಿನ ಪುರಾತನ ವಿಗ್ರಹ ಪತ್ತೆಯಾಗಿದೆ. ನಂತರ ಈ ಬಗ್ಗೆ ಗ್ರಾಮಸ್ಥರೇ ಪುಲ್ವಾಮಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾಕಪೋರಾ ಪೊಲೀಸ್ ಠಾಣಾಧಿಕಾರಿ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ವಿಗ್ರಹವನ್ನು ವಶಕ್ಕೆ ಪಡೆದಿದ್ದಾರೆ.

ಅಲ್ಲಿಂದ ವಿಗ್ರಹದ ಬಗ್ಗೆ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ನಿರ್ದೇಶನಾಲಯಕ್ಕೆ ಪೊಲೀಸರು ಮಾಹಿತಿ ಕೊಟ್ಟಿದ್ದಾರೆ. ಬಳಿಕ ಎಲ್ಲ ರೀತಿಯ ಕಾನೂನಿನ ಪ್ರಕ್ರಿಯೆಗಳನ್ನು ಪೊಲೀಸರು ಪೂರ್ಣಗೊಳಿಸಿ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ಅಧಿಕಾರಿಗಳಿಗೆ ಅದನ್ನು ಹಸ್ತಾಂತರಿಸಲಾಗಿದೆ ಎಂದು ಪುಲ್ವಾಮಾ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಭ್ರಷ್ಟಾಚಾರ: 45 ಇಲಾಖೆಗಳ 715 ಕೇಂದ್ರ ಸರ್ಕಾರಿ ನೌಕರರ ವಿರುದ್ಧ'ಸಿಬಿಐ' ಕೇಸ್

ABOUT THE AUTHOR

...view details