ಮೊರೆನಾ, ಮಧ್ಯಪ್ರದೇಶ: ನದಿಯಲ್ಲಿ ಸ್ನಾನ ಮಾಡುವಾಗ ಮೂವರು ಬಾಲಕಿಯರು ನೀರುಪಾಲಾಗಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಚಂಬಲ್ ನದಿಯ ರಾಹು ಘಾಟ್‌ನಲ್ಲಿ ನಡೆದಿದೆ. ಚಂದ್ರಭಾನ್ ಕೇವಟ್ ಅವರ ಪುತ್ರಿ ಅನಸೂಯಾ (12), ಹರಿನಾರಾಯಣ ಕೇವಟ್ ಅವರ ಪುತ್ರಿ ಸುಹಾನಿ (13), ಭರೋಷಿ ಕೇವಟ್ ಅವರ ಪುತ್ರಿ ಸಂಧಾ (12) ಮೃತಪಟ್ಟವರಾಗಿದ್ದಾರೆ.
ಎಮ್ಮೆಗಳನ್ನು ನದಿಯ ಬಳಿಗೆ ತಂದಿದ್ದ ಮೂವರು ಬಾಲಕಿಯರು, ನಂತರ ನದಿಯಲ್ಲಿ ಸ್ನಾನ ಮಾಡಲು ಮುಂದಾಗಿದ್ದಾರೆ. ಸ್ನಾನ ಮಾಡುವ ವೇಳೆ ಹೆಚ್ಚು ಆಳವಿರುವ ಕಡೆ ತೆರಳಿದ್ದು, ಈ ವೇಳೆ, ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸ್ವಲ್ಪ ಸಮಯದ ನಂತರ, ಒಬ್ಬ ಹುಡುಗ ನದಿಯಲ್ಲಿ ಎರಡು ಮೃತದೇಹಗಳು ತೇಲುತ್ತಿರುವುದನ್ನು ಗಮನಿಸಿದ್ದು, ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾನೆ.