ಕರ್ನಾಟಕ

karnataka

ETV Bharat / bharat

ಮೂವರು ಬಾಲಕಿಯರ ಜೀವ ತೆಗೆದ ಸೆಲ್ಫಿ: ಕಾಲು ಜಾರಿ ಕೆರೆಗೆ ಬಿದ್ದು ದಾರುಣ ಸಾವು - ಮೂವರ ಜೀವ ತೆಗೆದ ಸೆಲ್ಫಿ

ಕೆರೆಯ ದಡದ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಇಬ್ಬರು ಸಹೋದರಿಯರು ಸೇರಿ ಮೂವರು ಬಾಲಕಿಯರು ಕಾಲು ಜಾರಿ ಬಿದ್ದು ದುರಂತ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

Three girls drown while taking selfies
Three girls drown while taking selfies

By

Published : Jul 6, 2021, 3:25 PM IST

ನಿರ್ಮಲ್​​(ತೆಲಂಗಾಣ): ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಮೂವರು ಬಾಲಕಿಯರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ನಿರ್ಮಲ್​ ಜಿಲ್ಲೆಯಲ್ಲಿ ನಡೆದಿದೆ. ಮೂವರ ಮೃತದೇಹ ಕೆರೆಯಲ್ಲಿ ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎಲ್ಕೆ ದಾದರಾವ್​ ಮತ್ತು ಮಂಗಳಬಾಯಿ ದಂಪತಿ ನಿರ್ಮಲ್ ಜಿಲ್ಲೆಯ ನೂರು ವಲಯದ ಸಿಂಗಿಗಮ್​​ ಗ್ರಾಮದಲ್ಲಿ ವಾಸವಾಗಿದ್ದರು. ಇವರಿಗೆ ಸ್ಮಿತಾ, ವೈಶಾಲಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ತಮ್ಮ ತಾಯಿ ಜೊತೆ ಸೇರಿ ನಿನ್ನೆ ತೋಟಕ್ಕೆ ತೆರಳಿದ್ದಾರೆ. ಇವರೊಂದಿಗೆ ಸಂಬಂಧಿ ಅಂಜಲಿ ಕೂಡ ತೆರಳಿದ್ದಳು. ತೋಟದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಸುತ್ತಾಡಿರುವ ಮೂವರು ತದನಂತರ ಪಕ್ಕದ ಕೆರೆಗೆ ಹೋಗಿದ್ದಾರೆ.

ಇದನ್ನೂ ಓದಿರಿ: ಪಾಕ್​ ವಿರುದ್ಧದ ಸರಣಿಗೆ ಆಯ್ಕೆಯಾದ ಇಂಗ್ಲೆಂಡ್ ಆಟಗಾರರಿಗೆ ಕೊರೊನಾ: ಯಾರ BENಗೆ ಕ್ಯಾಪ್ಟನ್‌ ಹೊಣೆ?

ಮಕ್ಕಳು ಮನೆಗೆ ಬರುತ್ತಾರೆಂದು ತಾಯಿ ಅವರನ್ನ ಅಲ್ಲೇ ಬಿಟ್ಟು ತೆರಳಿದ್ದಾಳೆ. ಕೆರೆಯ ದಡದ ಮೇಲೆ ನಿಂತುಕೊಂಡು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಏಕಾಏಕಿ ಕಾಲು ಜಾರಿ ಬಿದ್ದಿರುವ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಸ್ಮಿತಾ(17), ವೈಶಾಲಿ(14) ಹಾಗೂ ಅಂಜಲಿ(16) ದುರಂತ ಸಾವಿಗೀಡಾಗಿದ್ದಾರೆ. ಸಂಜೆಯಾದರು ಮಕ್ಕಳು ಮನೆಗೆ ಬರಲಿಲ್ಲ ಎಂದು ತಾಯಿ ಹುಡುಕಲು ತೆರಳಿದ್ದಾಗ ಅವರ ಮೃತದೇಹಗಳು ಕೆರೆಯಲ್ಲಿ ಕಾಣಿಸಿಕೊಂಡಿವೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details