ರಿಷಿಕೇಶ:ಉತ್ತರಾಖಂಡದ ರಿಷಿಕೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಐವರು ದುಷ್ಕರ್ಮಿಗಳು ಅಸ್ಸೋಂನ ಮೂವರು ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅರುಪ್, ಲಿಂಡಾ ಮತ್ತು ರಿಚರ್ಡ್ ಹಲ್ಲೆಗೊಳಗಾದ ಯುವಕರು. ಕೆಲಸ ಕೊಡಿಸುವುದಾಗಿ ದುಷ್ಕರ್ಮಿಗಳು ಫೋನ್ ಕರೆ ಮಾಡಿದ್ದಾರೆ. ಆ ಕೆಲಸವನ್ನು ಯುವಕರು ಒಪ್ಪದಿದ್ದಾಗ, ಅವರನ್ನು ಸುಮಾರು ಮೂರು ವಾರಗಳ ಕಾಲ ಒತ್ತೆಯಾಳಾಗಿ ಇರಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಇದೀಗ ಯುವಕರು ತಪ್ಪಿಸಿಕೊಂಡಿದ್ದು, ಅಪರಾಧಿಗಳು ತಲೆಮರೆಸಿಕೊಂಡಿದ್ದಾರೆ.
ಸಂತ್ರಸ್ತರಲ್ಲಿ ಒಬ್ಬರಾದ ಅರುಪ್ ಕುಮಾರ್ (28) ಮಕೇಶ್ವರ ಬ್ಲಾಕ್‌ನ ಕುನೌನ್ ಗ್ರಾಮದಲ್ಲಿ ಉದ್ಯೋಗ ಕೊಡಿಸುವಂತೆ ದುಷ್ಕರ್ಮಿಗಳ ಮುಂದೆ ಪ್ರಸ್ತಾಪ ಮಾಡಿದ್ದರು. ಅಲ್ಲದೇ ಅವರು ಆ ಗ್ರಾಮಕ್ಕೆ ತಲುಪಿ ತಕ್ಷಣ ಕೆಲಸ ಪ್ರಾರಂಭಿಸುವಂತೆ ಹೇಳಿದ್ದರು. ಮೂವರು ಅಲ್ಲಿಗೆ ತಲುಪಿದಾಗ, ಅವರ ಬಳಿ ಹಣ ಕೇಳಿದ್ದಾರೆ. ಹಣ ಕೊಡಲು ಮೂವರು ನಿರಾಕರಿಸಿದಾಗ, ಐವರು ವ್ಯಕ್ತಿಗಳು ಬಲವಂತವಾಗಿ ಮೂವರನ್ನು ಕೊಠಡಿಯಲ್ಲಿ ಇರಿಸಿದ್ದಾರೆ.