ಕರೀಂನಗರ, ತೆಲಂಗಾಣ: ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಬಾಲಕಿಯೊಬ್ಬಳು ತನ್ನ ಪ್ರೇಮಿ ಮತ್ತು ಇಬ್ಬರು ಸ್ನೇಹಿತರಿಂದಲೇ ಅತ್ಯಾಚಾರಕ್ಕೊಳಗಾಗಿರುವ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಆದರೆ, ಈ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಜನರನ್ನು ಪೊಲೀಸರು ಬಂಧಿಸಿದ್ದು, ಇದರಲ್ಲಿ ಐವರು ಬಾಲಕರಾಗಿದ್ದಾರೆ.
ಬಾಲಕಿಯ ಮೇಲೆ ಅತ್ಯಾಚಾರ: ಇತ್ತೀಚಿಗೆ ಕರೀಂನಗರ ಪಟ್ಟಣದಲ್ಲಿ ಬಾಲಕಿ ತನ್ನ ಪ್ರಿಯಕರನೊಂದಿಗೆ ಏಕಾಂತದಲ್ಲಿ ಕಾಲ ಕಳೆಯುತ್ತಿದ್ದಳು. ಈ ಸಂದರ್ಭದಲ್ಲಿ ಆಕೆಯ ಸ್ನೇಹಿತರು ರಹಸ್ಯವಾಗಿ ಫೋಟೋ ಮತ್ತು ವಿಡಿಯೋಗಳನ್ನು ಸೆರೆ ಹಿಡಿದಿದ್ದರು. ಬಳಿಕ ಆಕೆಯನ್ನು ಬೆದರಿಸಿ ವಿವಿಧ ಸಂದರ್ಭಗಳಲ್ಲಿ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕ ವಯಸ್ಸಿನಲ್ಲಿ ಪ್ರೀತಿಗೆ ಬಿದ್ದ ಬಾಲೆ:ಪೊಲೀಸರ ಪ್ರಕಾರ, ಕರೀಂನಗರ ಜಿಲ್ಲೆಯೊಂದರ ಶಾಲೆಯಲ್ಲಿ ಬಾಲಕಿ ಹತ್ತನೇ ತರಗತಿ ಓದುತ್ತಿದ್ದಾಳೆ. ಬಾಲಕಿ ತಾನು ವಾಸಿಸುತ್ತಿದ್ದ ಬೀದಿಯಲ್ಲಿ ಇಂಟರ್ ಓದುತ್ತಿದ್ದ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಅನ್ಯೋನ್ಯವಾಗಿಯೇ ಇದ್ದರು. ಒಂದು ವರ್ಷದ ಹಿಂದೆ ಸಂದರ್ಭವೊಂದರಲ್ಲಿ ಪ್ರೇಮಿಗಳು ಏಕಾಂತದಲ್ಲಿ ಕಾಲ ಕಳೆದಿದ್ದಾರೆ. ಆದರೆ, ಪ್ರೇಮಿಗಳಿಬ್ಬರು ಏಕಾಂತದಲ್ಲಿ ಕಾಲ ಕಳೆದ ದೃಶ್ಯವನ್ನು ಹುಡುಗನ ಇಬ್ಬರು ಸ್ನೇಹಿತರು ರಹಸ್ಯವಾಗಿ ಚಿತ್ರೀಕರಿಸಿದ್ದರು. ಬಳಿಕ ವಿಡಿಯೋ ಮತ್ತು ಫೋಟೋಗಳನ್ನು ಮುಂದಿಟ್ಟುಕೊಂಡು ಬಾಲಕಿಗೆ ಬೆದರಿಕೆ ಹಾಕಲು ಶುರುಮಾಡಿದ್ದಾರೆ.
ಬಾಲಕಿಗೆ ಬೆದರಿಸಿ ಅತ್ಯಾಚಾರ:ನಾವು ತೆಗೆದ ವಿಡಿಯೋ ಮತ್ತು ಫೋಟೋಗಳನ್ನು ನಿಮ್ಮ ಪೋಷಕರಿಗೆ ಕಳುಹಿಸುವುದಾಗಿ ಆರೋಪಿಗಳು ಬಾಲಕಿಗೆ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಭೀತರಾದ ಬಾಲಕಿ ಆರೋಪಿಗಳ ಷರತ್ತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಬಾಲಕಿಯ ಭಯವನ್ನು ಸದುಪಯೋಗ ಪಡಿಸಿಕೊಂಡ ಆರೋಪಿಗಳು ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ.