ಪಣಜಿ: ಗೋವಾ ಜಲಗಡಿಯನ್ನು ಪ್ರವೇಶಿಸಿದ್ದಕ್ಕಾಗಿ ಕರ್ನಾಟಕದಿಂದ ಮೂರು ಮೀನುಗಾರರನ್ನು ಗೋವಾದ ಅಧಿಕಾರಿಗಳು ಸೋಮವಾರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಮೀನುಗಾರರು ನಿಯಮಗಳನ್ನು ಪಾಲಿಸದ ಕಾರಣ ಕ್ರಮ ಕೈಗೊಳ್ಳಲಾಗಿದೆ ಎಂದು ಮೀನುಗಾರಿಕಾ ಸಚಿವ ನೀಲಕಂಠ ಹಳರಂಕರ್ ತಿಳಿಸಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ಕರ್ನಾಟಕದ ಮೀನುಗಾರರು ಗೋವಾ ಜಲಪ್ರದೇಶವನ್ನು ಪ್ರವೇಶಿಸಿದ್ದಾರೆ. ಆದ್ದರಿಂದ ಮೀನುಗಾರರು ಮತ್ತು ಅವರ ಬೋಟ್ಗಳನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಸಂಜೆ ಮೀನುಗಳನ್ನು ಹರಾಜು ಮಾಡಲಾಯಿತು ಎಂದು ನೀಲಕಂಠ ಹಳರಂಕರ್ ತಿಳಿಸಿದ್ದಾರೆ.