ಕರ್ನಾಟಕ

karnataka

ETV Bharat / bharat

ವೆಂಟಿಲೇಟರ್​ ಬೆಡ್​ಗೆ 1 ಲಕ್ಷ ರೂ. ಕೇಳಿದ ವೈದ್ಯರ ಬಂಧನ - hospital in Pune's Pimpri Chinchwad

ಮಹಾನಗರ ಪಾಲಿಕೆ ಅಡಿಯಲ್ಲಿ ಬರುವ ಆಸ್ಪತ್ರೆಯ ವೈದ್ಯರು ವೆಂಟಿಲೇಟರ್​ ಬೆಡ್​ಗೆ 1 ಲಕ್ಷ ರೂ. ಬಿಲ್​ ಮಾಡಿ, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ವೆಂಟಿಲೇಟರ್​ ಬೆಡ್​ಗೆ 1 ಲಕ್ಷ ರೂ. ಕೇಳಿದ ವೈದ್ಯರ ಬಂಧನ
Three doctors held in Pune for charging Rs 1 lakh for ventilator bed

By

Published : May 4, 2021, 12:45 PM IST

ಪುಣೆ (ಮಹಾರಾಷ್ಟ್ರ): ಆಕ್ಸಿಜನ್​, ಹಾಸಿಗೆಗಳು ಸಿಗದೇ ಪ್ರತಿನಿತ್ಯ ಕೋವಿಡ್​ ರೋಗಿಗಳು ಪರದಾಡುತ್ತಿರುವ ಈ ಸಂದರ್ಭದಲ್ಲಿ ಆಸ್ಪತ್ರೆಯೊಂದು ವೆಂಟಿಲೇಟರ್​ ಬೆಡ್​ಗೆ 1 ಲಕ್ಷ ರೂ. ಹಣ ಕೇಳಿರುವುದು ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚ್ವಾಡ್ ಪ್ರದೇಶದ ಮಹಾನಗರ ಪಾಲಿಕೆ ಅಡಿಯಲ್ಲಿ ಬರುವ ಆಸ್ಪತ್ರೆಯ ವೈದ್ಯರು ರೋಗಿಯ ಕುಟುಂಬಕ್ಕೆ 1 ಲಕ್ಷ ರೂ. ಬಿಲ್​ ಮಾಡಿದ್ದಾರೆ. ಉಚಿತ ಹಾಸಿಗೆ ಒದಗಿಸಬೇಕಾದ ಪಾಲಿಕೆ ಆಸ್ಪತ್ರೆ ಇಷ್ಟೊಂದು ದೊಡ್ಡ ಮೊತ್ತದ ಹಣ ಕೇಳಿರುವುದರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಈ ಸಂಬಂಧ ಮೂವರು ವೈದ್ಯರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟ: ವಿಜಯಪುರದಲ್ಲಿ 3 ಪ್ರಕರಣ ದಾಖಲು

ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯಿರುವ ಈ ವೇಳೆಯಲ್ಲಿ ರೆಮ್ಡೆಸಿವಿರ್, ಆಮ್ಲಜನಕ, ಮತ್ತು ಇತರ ವೈದ್ಯಕೀಯ ಸರಕುಗಳನ್ನು ಅಕ್ರಮವಾಗಿ ಸಂಗ್ರಹಿಸಿ, ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ.

ABOUT THE AUTHOR

...view details