ಚೆನ್ನೈ, ತಮಿಳುನಾಡು:ವಿದ್ಯುತ್ ಅವಘಡ ಸಂಭವಿಸಿ, ಪ್ರತ್ಯೇಕ ಘಟನೆಗಳಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಚೆನ್ನೈ ನಗರದಲ್ಲಿ ನಡೆದಿದೆ. ಭಾರಿ ಮಳೆಯ ಕಾರಣ ಈ ವಿದ್ಯುತ್ ಅವಘಡಗಳು ಸಂಭವಿಸಿವೆ.
ಚೆನ್ನೈನಲ್ಲಿ ಗುರುವಾರ ಮಧ್ಯಾಹ್ನದ ವೇಳೆಗೆ ಭಾರಿ ಮಳೆ ಸುರಿದಿದ್ದು, ಹಲವಾರು ರಸ್ತೆಗಳಲ್ಲಿ ನೀರು ತುಂಬಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಇಷ್ಟೇ ಅಲ್ಲದೇ ಹಲವೆಡೆ ವಿದ್ಯುತ್ ಅವಘಡಗಳು ಸಂಭವಿಸಿದ್ದು, ಚೆನ್ನೈನ ಒಟ್ಟೆರಿ ಪ್ರದೇಶದಲ್ಲಿ 70 ವರ್ಷದ ಮಹಿಳೆ ತಮಿಳರಸಿ ಮೃತಪಟ್ಟಿದ್ದಾರೆ.