ಗೋಲ್ಪರಾ(ಅಸ್ಸೋಂ):ಮೂವರು ಕ್ರಿಮಿನಲ್ಗಳನ್ನು ಪೊಲೀಸರು ಎನ್ಕೌಂಟರ್ ಮಾಡಿರುವ ಘಟನೆ ಗೋಲ್ಪರಾ ಜಿಲ್ಲೆಯಲ್ಲಿ ನಡೆದಿದೆ. ಮೊದಲು ಶರಣಾಗುವಂತೆ ಪೊಲೀಸರು ಹೇಳಿದರೂ ಅಪರಾಧಿಗಳು ಇದಕ್ಕೆ ಸೊಪ್ಪು ಹಾಕಲಿಲ್ಲ. ಹಾಗಾಗಿ ಎನ್ಕೌಂಟರ್ ಕಾರ್ಯಾಚರಣೆ ನಡೆಸಬೇಕಾಯಿತು ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮೃನಲ್ ಡೇಕಾ ಮಾಹಿತಿ ನೀಡಿದ್ದಾರೆ.
ಹತರಾದವರನ್ನು ಶಹಜಹಾನ್, ನಝ್ಮುಲ್ ಮತ್ತು ಸಾಜಲ್ ಎಂದು ಗುರುತಿಸಲಾಗಿದೆ. ಈ ಹಿಂದೆ ಇವರ ವಿರುದ್ಧ ಕ್ರಿಮಿನಲ್ ಕೇಸ್ಗಳು ದಾಖಲಾಗಿದ್ದವು ಎಂದು ತಿಳಿದುಬಂದಿದೆ. ಘಟನೆ ಕುರಿತು ವಿವರಿಸಿರುವ ಎಎಸ್ಪಿ ಮೃನಲ್ ಡೇಕಾ, 'ಕ್ರಿಮಿನಲ್ಗಳು ಟ್ರಕ್ನಲ್ಲಿ ಅಡಗಿ ಕುಳಿತು ಪರಾರಿಯಾಗಲು ಯತ್ನಿಸಿದ್ದರು. ಆಗ ಟ್ರಕ್ ಅನ್ನು ತಡೆದು ಬಂಧಿಸಲು ಮುಂದಾದಾಗ ನಮ್ಮ ಮೇಲೆಯೇ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದರು. ಈ ವೇಳೆ ಪ್ರತಿಯಾಗಿ ಗುಂಡು ಹಾರಿಸಬೇಕಾಯಿತು' ಎಂದಿದ್ದಾರೆ.