ಜಮ್ಮು ಮತ್ತು ಕಾಶ್ಮೀರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹೈಫ್ ಶರ್ಮಲ್ ಪ್ರದೇಶದಲ್ಲಿ ಸೋಮವಾರ ಸಶಸ್ತ್ರ ಪಡೆಯಿಂದ ನಡೆದ ಎನ್‌ಕೌಂಟರ್ ಸ್ಥಳದಲ್ಲಿ ನಿಗೂಢ ಸ್ಫೋಟದಲ್ಲಿ 3 ಮಕ್ಕಳು ಗಾಯಗೊಂಡಿದ್ದಾರೆ.
ಸ್ಥಳೀಯ ಜನರ ಪ್ರಕಾರ, ಸೋಮವಾರ ಹೈಫ್ ಶರ್ಮಲ್‌ನಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಸ್ಥಳೀಯ ಉಗ್ರನೊಬ್ಬ ಹತನಾಗಿದ್ದಾನೆ. ನಂತರ ಪಡೆಗಳು ಇಂದು ಬೆಳಗ್ಗೆ ಪ್ರದೇಶ ಸ್ಥಳಾಂತರಿಸಿದವು ಮತ್ತು ಭದ್ರತಾ ಪಡೆಗಳು ಇಲ್ಲಿಂದ ನಿರ್ಗಮಿಸಿದವು. ಈ ವಸತಿ ಗೃಹದ ಬಳಿ ಮಕ್ಕಳು ಜಮಾಯಿಸಿದಾಗ ಇದ್ದಕ್ಕಿದ್ದಂತೆ ನಿಗೂಢ ಸ್ಫೋಟ ಸಂಭವಿಸಿದ್ದು, 3 ಮಕ್ಕಳು ಗಾಯಗೊಂಡಿದ್ದಾರೆ.