ನವದೆಹಲಿ:ಯಮುನಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ನಾಲ್ವರು ಮಕ್ಕಳಲ್ಲಿ ಮೂವರು ನೀರುಪಾಲಾಗಿದ್ದಾರೆ. ಓರ್ವನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮೃತರು ಇಲ್ಲಿನ ಭಜನಾಪುರ ಪ್ರದೇಶದವರು ಎಂದು ತಿಳಿದುಬಂದಿದೆ.
ಸ್ನಾನಕ್ಕೆಂದು ಯಮುನೆಗೆ ತೆರಳಿದ್ದ ಮೂವರು ಮಕ್ಕಳು ನೀರುಪಾಲು - New Delhi
ಸ್ನಾನಕ್ಕೆಂದು ಯಮುನಾ ನದಿಗೆ ತೆರಳಿದ್ದ ಬಾಲಕರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ಘಟನೆ ಉತ್ತರ ದೆಹಲಿಯ ವಜೀರಾಬಾದ್ನಲ್ಲಿ ನಡೆದಿದೆ.
ನೀರುಪಾಲು
ನದಿಗಿಳಿದ ಮಕ್ಕಳಿಗೆ ಆಳದ ಬಗ್ಗೆ ಅರಿವಿರಲಿಲ್ಲ. ಪರಿಣಾಮ, ನೀರಿನ ಸೆಳೆತಕ್ಕೆ ಮೂವರು ಕೊಚ್ಚಿಹೋಗಿದ್ದು, ಇನ್ನೋರ್ವ ಬಾಲಕನನ್ನು ರಕ್ಷಿಸಲಾಗಿದೆ.
ಮಾಹಿತಿ ತಿಳಿದ ತಕ್ಷಣ ಸ್ಥಳೀಯಾಡಳಿತ ಸಿಬ್ಬಂದಿ ಆಗಮಿಸಿ, ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಬಳಿಕ ಶವಗಳನ್ನು ನೀರಿನಿಂದ ಹೊರತೆಗೆದು, ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.